

ಬೆಂಗಳೂರು: ಆಭರಣ ತಯಾರಿಕೆ, ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಜೋಯಾಲುಕ್ಕಾಸ್ ಸಂಸ್ಥೆ, ನಗರದ ಡಿಕನ್ಸನ್ ರಸ್ತೆಯಲ್ಲಿ ಸುಸಜ್ಜಿತ ಮಳಿಗೆಯನ್ನು ಶನಿವಾರ ಮರು ಪ್ರಾರಂಭಿಸಿದೆ. ಶಾಸಕ ರಿಜ್ವಾನ್ ಅರ್ಷದ್ ಉದ್ಘಾಟಿಸಿದರು.
ಉದ್ಘಾಟನೆ ನಿಮಿತ್ತ ಚಿನ್ನ, ವಜ್ರಾ, ಅನಕಟ್ ವಜ್ರಾ, ರತ್ನ, ಪ್ಲಾಟಿನಂ, ಹರಳು ಮತ್ತು ಬೆಳ್ಳಿ ಆಭರಣಗಳ ತಯಾರಿಕೆಯಲ್ಲಿ ಶೇ.50 ರಿಯಾಯಿತಿ ಘೋಷಿಸಿದೆ. ನೂತನ ಮಳಿಗೆಯನ್ನು ಗ್ರಾಹಕರ ಅನುಕೂಲತೆ ಹಾಗೂ ಸೌಕರ್ಯ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಪ್ರೀಮಿಯಂ ಸೌಲಭ್ಯ ಹೊಂದಿದೆ. ನೆಲ ಮಹಡಿಯಲ್ಲಿ ಗೋಲ್ಡ್ ಜುವೆಲ್ಲರಿ, 2ನೇ ಮಹಡಿಯಲ್ಲಿ ವಜ್ರ, ಪ್ಲಾಟಿನಂ ಆಭರಣ ಮತ್ತು 3ನೇ ಮಹಡಿಯಲ್ಲಿ ಬೆಳ್ಳಿ, ಚಿನ್ನ ಆಭರಣಗಳನ್ನು ಸಂಗ್ರಹಿಸಲಾಗಿದೆ.
ಜೋಯಾಲುಕ್ಕಾಸ್ ಗ್ರೂಪ್ನ ಸಿಎಂಡಿ ಜಾಯ್ ಅಲುಕ್ಕಾಸ್ ಮಾತನಾಡಿ, ಗ್ರಾಹಕರು ಯೋಗ್ಯ ದರದಲ್ಲಿ ನೆಚ್ಚಿನ ಆಭರಣ ಖರೀದಿಸುವ ಅವಕಾಶವನ್ನು ನಮ್ಮ ಮಳಿಗೆ ನೀಡಲಿದೆ ಎಂದರು. ಆರ್ಬಿಎಎನ್ಎಂಎಸ್ ಎಜುಕೇಷನಲ್ ಚಾರಿಟೀಸ್ ಅಧ್ಯಕ್ಷ ಡಾ.ನಂದಕುಮಾರ್ ಜೈರಾಮ್, ಜೋಯಾಲುಕ್ಕಾಸ್ ಕಾರ್ಯನಿರ್ವಾಹಕ ನಿರ್ದೇಶಕ ಥಾಮಸ್ ಮ್ಯಾಥ್ಯೂ, ಸಿಒಒ ಹೆನ್ರಿ ಜಾರ್ಜ್ ಮತ್ತಿತರರಿದ್ದರು.
160ಕ್ಕೂ ಅಧಿಕ ಮಳಿಗೆಗಳು:
ಜೋಯಾಲುಕ್ಕಾಸ್ 11 ರಾಷ್ಟ್ರಗಳಲ್ಲಿ 160ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿದೆ. ನೂತನ ಮಳಿಗೆಯಲ್ಲಿ ವೇದ ಟೆಂಪಲ್ ಜುವೆಲ್ಲರಿ, ಪೆಡ್ ಡೈಮಂಡ್ಸ್, ಎಲೆಗಂಜಾ ಪೋಲ್ಕಿ ಆಭರಣ, ಮಸಾಕಿ ಪರ್ಲ್ಸ್ ಜೆನ್ನಿಯಾ ಟರ್ಕಿಶ್ ಆಭರಣ, ಮಕ್ಕಳ ಆಭರಣ, ದಿನಿತ್ಯ ಧರಿಸುವ ಆಭರಣ, ಪೊಲ್ಕಿ, ಪುರಾತನ ವಿನ್ಯಾಸದ ಬಳೆಗಳು, ಸರಗಳು, ಮೋಪು ಚೈನ್ಗಳು, ಪಚ್ಚಿ ಆಭರಣ, ಹಗುರ ತೂಕ, ಎತ್ನಿಕ್, ಎಮರಾಲ್ಡ್, ವಂಕೀ ಆಭರಣಗಳು ಹಾಗೂ ಬ್ರೇಸ್ಲೆಟ್ಗಳಿವೆ. ಅನ್ಕಟ್ ಪೊಲ್ಕಿ ಆಭರಣ ಮತ್ತು ಜುಮುಕೀಸ್, ಚಿಪ್ಪಾ ಆಭರಣಗಳು, ಸಿಗ್ನೀಟಿ ಬ್ರೇಸ್ಲೆಟ್ಸ್ ಮತ್ತು ಬಳೆಗಳು, ನಾಗಾಸ್ ಡಿಸೈನ್ಸ್ಗಳಿವೆ. ಚಿನ್ನದ ವಸ್ತು, ಜಡೆ, ಉಂಗುರ, ಕಿವಿಯೋಲೆ ಮತ್ತು ಡ್ಯಾಪ್ಸ್, ಬೆಳ್ಳಿ ಚೈನ್, ಪೆಂಡೆಂಟ್ ವಿನ್ಯಾಸದ ಆಭರಣಗಳಿವೆ ಎಂದು ಮಾಹಿತಿ ನೀಡಿದರು.
ಹಿಂದೆ ಚಿಕ್ಕದಾಗಿ ಜೋಯಾಲುಕ್ಕಾಸ್ ಮಳಿಗೆ ಶುರು ಮಾಡಿದ್ದರು. ಇದೀಗ ಸುಸಜ್ಜಿತವಾಗಿ ಮರು ಆರಂಭಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾದ ಇದು ಚಿನ್ನಾಭರಣ ಕ್ಷೇತ್ರದಲ್ಲಿ ಒಳ್ಳೆಯ ಸೇವೆ ನೀಡುತ್ತಿದೆ. ಗ್ರಾಹಕರು ಸಂಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರಿಗೆ ಶುಭವಾಗಲಿ.
| ರಿಜ್ವಾನ್ ಅರ್ಷದ್, ಶಾಸಕ.