ಜ್ಞಾನವಿಕಾಸ ಮಹಿಳಾ ವಿಚಾರಗೋಷ್ಠಿ

New Project (7)
Published on

ಬದಿಯಡ್ಕ: ಕಾಸರಗೋಡು ತಾಲೂಕುಮಟ್ಟದ ಜ್ಞಾನವಿಕಾಸ ಮಹಿಳಾ ವಿಚಾರಗೋಷ್ಠಿ ಬದಿಯಡ್ಕದಲ್ಲಿ ಇತ್ತೀಚೆಗೆ ಜರುಗಿತು. ಕಾಸರಗೋಡು ಜಿಪಂ ಸದಸ್ಯೆ ಶೈಲಜಾ ಭಟ್ ಉದ್ಘಾಟಿಸಿದರು. ನೀರ್ಚಾಲು ಒಕ್ಕೂಟ ಅಧ್ಯಕ್ಷೆ ಶಿವಾನಿ ಅಧ್ಯಕ್ಷತೆ ವಹಿಸಿದ್ದರು. ದ.ಕ.2 ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಹಿಳಾ ಜ್ಞಾನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಮಹಿಳೆಯರಲ್ಲಾದ ಬದಲಾವಣೆ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರದ ಕುರಿತು ಮಾರ್ಗದರ್ಶನ ನೀಡಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ಸಾಮಾಜಿಕ ಕಾರ್ಯಕರ್ತೆ ಆಯಿಷಾ ಪೆರ್ಲ, ಕೇಂದ್ರ ಒಕ್ಕೂಟ ಅಧ್ಯಕ್ಷ ಜ್ಞಾನೇಶ್ ಆಚಾರ್ಯ, ಗಂಗಾಧರ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಗಂಗಾಧರ್ ಆಳ್ವ ಉಪಸ್ಥಿತರಿದ್ದರು. ಮೂರು ತಿಂಗಳ ಟೈಲರಿಂಗ್ ತರಬೇತಿಯಲ್ಲಿ ತರಬೇತಿ ಪಡೆದ ಕೇಂದ್ರದ ಸದಸ್ಯರಿಗೆ ಪ್ರಮಾಣಪತ್ರ ನೀಡಲಾಯಿತು.

ಹಿರಿಯ ಶಿಕ್ಷಕಿ ಅನಿತಾ ಕುಮಾರಿ ವಿಚಾರಗೋಷ್ಠಿ ನಡೆಸಿಕೊಟ್ಟರು. ಕೇಂದ್ರದ ಸದಸ್ಯರಿಗೆ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಲೂಕು ಯೋಜನಾಧಿಕಾರಿ ಮುಖೇಶ್ ಸ್ವಾಗತಿಸಿ, ವಲಯ ಮೇಲ್ವಿಚಾರಕ ಗೋಪಾಲಕೃಷ್ಣವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯಾ ಹಾಗೂ ನೀರ್ಚಾಲು ಜ್ಞಾನವಿಕಾಸ ಕೇಂದ್ರದ ಸದಸ್ಯೆ ಸಂಧ್ಯಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net