ಜೆಲ್ಲಿ ಬೇಕು ಎಂದಾಕ್ಷಣ ಮಕ್ಕಳಿಗೆ ಅವನ್ನು ಕೊಡಿಸಬೇಡಿ- ಅವಕ್ಕೆ ಮರಿಜುವಾನಾ ಸವರಿರಬಹುದು !

Drug Jellyt
Published on

ಬೆಂಗಳೂರು: ಬಣ್ಣ ಬಣ್ಣದ ಜೆಲ್ಲಿಗಳನ್ನು ನೋಡಿದ ತತ್​ಕ್ಷಣ ಮಕ್ಕಳ ಮನಸೋಲುವುದು ಸಹಜ. ಹಾಗಂತ ಅವರು ಅತ್ತು ಗೋಗರೆದರೂ ಜೆಲ್ಲಿಗಳನ್ನು ಕೊಡಿಸುವ ಮುನ್ನ ಯೋಚಿಸಿ. ಕೆಲವು ಜೆಲ್ಲಿಗಳಿಗೆ ಮರಿಜುವಾನಾವನ್ನು ಲೇಪಿಸಲಾಗಿರುತ್ತದೆ. ಅಂಥ ಜೆಲ್ಲಿಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಮಕ್ಕಳಿಗೆ ಮಾರಾಟ ಮಾಡುವುದಕ್ಕಾಗಿ ಕಾರಿನಲ್ಲಿರಿಸಿಕೊಂಡಿದ್ದ ಇಂತಹ ಜೆಲ್ಲಿಗಳನ್ನು ಸಿಸಿಬಿ ಪೊಲೀಸರು ವಶಪಡಿಸಿದ್ದಾರೆ. ಇಬ್ಬರು ಡ್ರಗ್​ ಪೆಡ್ಲರ್​ಗಳನ್ನೂ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.

ರಸ್ತೆ ಬದಿ ಕಾರಿನಲ್ಲಿ ಅಥವಾ ಇನ್ಯಾವುದೇ ವಾಹನಗಳಲ್ಲಿ ಮಾರಾಟ ಮಾಡುವ ಇಂತಹ ಜೆಲ್ಲಿಗಳನ್ನು ಖರೀದಿಸುವ ಮೊದಲು ಎಚ್ಚರಿಕೆ ವಹಿಸಿ. ಪಾಲಕರೂ ಈ ಬಗ್ಗೆ ಗಮನಹರಿಸಿ ಎಚ್ಚರಿಕೆ ವಹಿಸಬೇಕು ಎಂಬರ್ಥದ ಟ್ವೀಟ್ ಒಂದನ್ನು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಡಿದ್ದು ಸಾರ್ವಜನಿಕರ ಗಮನಸೆಳೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net