More

    ಎಂ.ಜಿ.ರೋಡ್​ನಲ್ಲಿ ರಾಜಾರೋಷವಾಗಿ ಡ್ರಗ್ಸ್ ಮಾರಾಟ- ಇಬ್ಬರು ಪೆಡ್ಲರ್​ಗಳು ಅಂದರ್

    ಬೆಂಗಳೂರು: ಡ್ರಗ್ಸ್​ ಮಾಫಿಯಾ ಮಟ್ಟ ಹಾಕುವುದಕ್ಕೆ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿರುವ ಬೆನ್ನಿಗೆ, ಅದಾವುದರ ಪರಿವೆಯೂ ಇಲ್ಲದವರಂತೆ ರಾಜ್ಯ ರಾಜಧಾನಿಯ ಎಂ.ಜಿ.ರಸ್ತೆಯಲ್ಲಿ ರಾಜಾರೋಷವಾಗಿ ಕಾರಿನಲ್ಲೇ ಮಾದಕ ವಸ್ತು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಪೆಡ್ಲರ್​ಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

    ಕೊತ್ತನೂರು ನಿವಾಸಿ ಜಾನ್ ನಿಖೋಲನ್ (21) ಮತ್ತು ಜೆ.ಪಿ.ನಗರದ ಇರ್ಫಾನ್ ಶೇಖ್ (29) ಬಂಧಿತರು. ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ ಟಿಎಚ್‌ಸಿ ಜೆಲ್ಲಿ (ಟೆಟ್ರಾ ಹೈಡ್ರೋ ಕೆನ್ನಾಬಿನೋಲ್), 34 ಎಕ್ಸಟಸಿ ಪಿಲ್ಸ್, 27 ಎಲ್‌ಎಸ್‌ಡಿ ಸ್ಟ್ರಿಪ್ಸ್, 2 ಮೊಬೈಲ್ ಹಾಗೂ ಕಾರು ಜಪ್ತಿ ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

    ಇದನ್ನೂ ಓದಿ: ಸಾಲ ಬರೆ ಜನರಿಗೆ ಹೊರೆ: ಸಂಪನ್ಮೂಲ ಹೆಚ್ಚಳಕ್ಕೆ ಸರ್ಕಾರ ಸರ್ಕಸ್, ತೆರಿಗೆ ಭಾರ ಬಹುತೇಕ ಫಿಕ್ಸ್

    ಎಂ.ಜಿ.ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ಆಧರಿಸಿ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಅಶ್ವಿನ್ ಎಂಬುವನಿಂದ ಕಡಿಮೆ ಬೆಲೆಗೆ ಸಗಟು ರೂಪದಲ್ಲಿ ಡ್ರಗ್ಸ್ ಖರೀದಿಸಿ ದಂಧೆಯಲ್ಲಿ ತೊಡಗಿದ್ದರು. ತಲೆಮರೆಸಿಕೊಂಡಿರುವ ಅಶ್ವಿನ್‌ಗಾಗಿ ತೀವ್ರ ಶೋಧ ನಡೆಸಲಾಗಿದೆ. ಈ ಎಲ್ಲ ಡ್ರಗ್ಸ್ ವಿದೇಶದಿಂದ ಸಾಗಣೆಯಾಗಿರುವ ಶಂಕೆ ಇದೆ. ಆರೋಪಿಗಳ ವಿಚಾರಣೆ ಬಳಿಕ ಏನೆಂಬುದು ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

    ‘ನ್ಯಾಷನಲ್ ಅನ್​​ಎಂಪ್ಲಾಯ್ಮೆಂಟ್ ಡೇ’ ಟ್ರೆಂಡಿಂಗ್ ರಹಸ್ಯ ಇದೇನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts