ನಿಟ್ಟೆಯಲ್ಲಿ ಜೆಸಿಐ ದುಂದುಭಿ ಮಧ್ಯಂತರ ಸಮ್ಮೇಳನ

blm
Published on

ಕಾರ್ಕಳ: ಜೆಸಿಐ ಭಾರತ ವಲಯ 15ರ ದುಂದುಭಿ ಮಧ್ಯಂತರ ಸಮ್ಮೇಳನ 2025 ಜೆಸಿಐ ಬೆಳ್ಮಣ್ ಆತಿಥ್ಯದಲ್ಲಿ ನಿಟ್ಟೆಯಲ್ಲಿ ನಡೆಯಿತು.

ಜೆಸಿಐ ಕಾರ್ಕಳ ಘಟಕ ಲೋಕಲ್ ಆರ್ಗನೈಜೆಷನ್ ವಿನ್ನರ್, ಉತ್ತಮ ಘಟಕಾಧ್ಯಕ್ಷ ರನ್ನರ್ ಪ್ರಶಸ್ತಿ, ಡೈಮಂಡ್ ಘಟಕ ಪ್ರಶಸ್ತಿ, ಘಟಕ ವೈಭವ ಸಿಂಧೂರ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ವಲಯಾಧ್ಯಕ್ಷ ಅಭಿಲಾಶ್ ಬಿ.ಎ ಪ್ರಶಸ್ತಿಯನ್ನು ಜೆಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್.ಜೈನ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಅನ್ವೇಷ್ ಶೆಟ್ಟಿ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ಪೂರ್ವ ವಲಯ ಅಧಿಕಾರಿ ಪದ್ಮಪ್ರಸಾದ್ ಜೈನ್, ಸಮದ್ ಖಾನ್, ಪೂರ್ವಾದ್ಯಕ್ಷರಾದ ಸಂತೋಷ್ ಕುಮಾರ್, ದಿವ್ಯಾ, ಸ್ಮಿತಾ ಭಟ್, ಕುಂದಾಪುರ ಸಿಟಿ ಸಂಸ್ಥಾಪಕ ಅಧ್ಯಕ್ಷ ಜೇಸಿ ಹುಸೇನ್ ಹೈಕಾಡಿ ಹಾಗೂ ಕಾರ್ಕಳ ಘಟಕದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net