ಹಳೇ ವಿದ್ಯಾರ್ಥಿಗಳಿಂದ ಕಾಲೇಜಿಗೆ ನೀರಿನ ಘಟಕ ಕೊಡುಗೆ

pdb (3)
Published on

ಪಡುಬಿದ್ರಿ: ವಿದ್ಯೆ ಕಲಿತ ಕಾಲೇಜನ್ನು ಮರೆಯದೆ ಸಂಸ್ಥೆಯ ಮಕ್ಕಳಿಗೆ ಬಹಳ ಉಪಯುಕ್ತವಾಗಿರುವ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಹಳೇ ವಿದ್ಯಾರ್ಥಿಗಳು ಮಾಡಿಕೊಟ್ಟಿದ್ದಾರೆ ಎಂದು ಅದವಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಂಜೀವ ನಾಯ್ಕ ಹೇಳಿದರು.

ಅದವಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿಗೆ 1995ನೇ ಸಾಲಿನ ವಿಜ್ಞಾನ ವಿಭಾಗದ ಹಳೇ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ಟಕ ಉದ್ಘಾಟಿಸಿ ವಾತನಾಡಿದರು. ಕಾಲೇಜು ವಿಜ್ಞಾನ ವಿಭಾಗದ ಓರ್ವ ಬಡ ಪ್ರತಿಭಾವಂತ ವಿದ್ಯಾರ್ಥಿನಿಗೆ 10,000 ರೂ. ವಿದ್ಯಾರ್ಥಿ ಶುಲ್ಕದ ವೆಚ್ಚವನ್ನು ಹಳೇ ವಿದ್ಯಾರ್ಥಿಗಳು ಭರಿಸಿರುವುದಾಗಿ ತಿಳಿಸಿದರು.

ವಿದ್ಯಾರ್ಥಿಗಳಾದ ಅನಂತರಾಮ ರಾವ್, ಸುಬ್ರಹ್ಮಣ್ಯ ಶಾನುಭಾಗ್, ಮುರಳಿ ಲಾಲಾಜಿ, ಪ್ರಕಾಶ್ ದೇವಾಡಿಗ ಮತ್ತು ರವಾನಂದ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net