ಪಡುಕುತ್ಯಾರು ಮಠದಲ್ಲಿ ಆನೆಗುಂದಿ ಶ್ರೀಚಾತುರ್ಮಾಸ್ಯ

pdb (2)
Published on

ಪಡುಬಿದ್ರಿ: ಕಟಪಾಡಿ ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ 21ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಸೆಪ್ಟೆಂಬರ್ 7ರ ತನಕ ಪಡುಕುತ್ಯಾರಿನ ಶ್ರೀಮಠದಲ್ಲಿ ನಡೆಯಲಿದೆ.

ಮಠದಲ್ಲಿ ಶ್ರೀಗಳು ಬುಧವಾರ ಚಾತುರ್ಮಾಸ್ಯ ವ್ರತಾಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಚಾತುರ್ವಾಸ್ಯ ವ್ರತ ಸಂಕಲ್ಪ ಪೂರ್ವಭಾವಿಯಾಗಿ ಕ್ಷೇತ್ರ ಸಂದರ್ಶನ ಜೂ.12ರಂದು ಆನೆಗುಂದಿಯಿಂದ ಆರಂಭಗೊಳ್ಳಲಿದ್ದು, ಜುಲೈ 6ರಂದು ಕಾಞಂಗಾಡಿನಲ್ಲಿ ಕೊನೆಗೊಳ್ಳಲಿದೆ.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪದಾಧಿಕಾರಿಗಳಾದ ಪ್ರತಿಷ್ಠಾನದ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ ಕಂಬಾರ್, ಉಪಾಧ್ಯಕ್ಷ ಕೆ.ಪ್ರಭಾಕರ ಆಚಾರ್ಯ ಕೋಟೆಕಾರ್, ಕಾಡಬೆಟ್ಟು ನಾಗರಾಜ ಆಚಾರ್ಯ, ವಿವಿಧ ಸಮಿತಿಗಳ ಪ್ರಮುಖರಾದ ಬೆಳುವಾಯಿ ಸುಂದರ ಆಚಾರ್ಯ, ಸಂಧ್ಯಾ ಲಕ್ಷ್ಮಣ ಆಚಾರ್ಯ, ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆಯೂರು, ಕೆ.ರಾವೇಂದ್ರ ಆಚಾರ್ಯ ಕಾಡಬೆಟ್ಟು, ಕೆ.ಎಂ.ಮಧುಸೂದನ ಕಾಸರಗೋಡು, ವಿಠಲ ಆಚಾರ್ಯ ಎಲ್ಲೂರು, ಲೋಲಾಕ್ಷ ಶರ್ಮ ಪಡುಕುತ್ಯಾರು, ಗಣೇಶ್ ಆಚಾರ್ಯ ಕೋಟ, ಕೇಶವ ಶರ್ಮ ಇರುವೈಲು, ದಯಾನಂದ ಆಚಾರ್ಯ ಕೆಳಾರ್ಕಳಬೆಟ್ಟು, ಮೌನೇಶ ಶರ್ಮ ಪಡುಕುತ್ಯಾರು, ನವೀನ್ ಆಚಾರ್ಯ ಪಣಿಯೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net