ಮತ ನೀಡುವುದು ಪ್ರಧಾನಿಗಲ್ಲ, ಅಭ್ಯರ್ಥಿಗೆ: ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿಕೆ

hegde
ಕಾಪು ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿದರು. ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ ಮುಖಂಡರಾದ ಅಡ್ವೆ ನವೀನ್ ಚಂದ್ರ ಸುವರ್ಣ, ಯಶ್ವಂತ್ ಕುಕ್ಯಾನ್, ಸುನೀಲ್ ಬಂಗೇರಾ, ಸುಕುಮಾರ್ ಪಡುಬಿದ್ರಿ, ನವೀನ್ ಚಂದ್ರ ಶೆಟ್ಟಿ, ಕರುಣಾಕರ ಪೂಜಾರಿ, ದಿವಾಕರ್ ಶೆಟ್ಟಿ, ರಮೀಜ್ ಹುಸೈನ್, ಸುಧೀರ್ ಕರ್ಕೇರಾ, ಪ್ರಶಾಂತ್ ಜತ್ತನ್ನ, ಮೆಲ್ವಿನ್ ಡಿಸೋಜಾ, ಗುಲಾಮ್ ಮೊಹಮ್ಮದ್, ಅಜೀಜ್ ಮೊದಲಾದವರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಉಡುಪಿ
ಸಂಸದರಾಗಿ ಏನೂ ಕೆಲಸವನ್ನು ವಾಡದೆ ಕೇವಲ ನಾಯಕನ ಹೆಸರಲ್ಲಿ ಮತವನ್ನು ಕೇಳಿದವರು 5 ವರ್ಷದ ಬಳಿಕ ಮತ್ತೆ ಬರುತ್ತಾರೆ. ನಾಯಕನಿಗೆ ಮತವನ್ನು ನೀಡಿದರೆ ಸಂಸದರಾದವರು ಆರಾಮವಾಗಿ ದೆಹಲಿಯಲ್ಲಿ ಕುಳಿತು ಕಾಲ ಕಳೆಯುತ್ತಾರೆ. ನಾವು ಮತವನ್ನು ನೀಡುವುದು ಪ್ರಧಾನ ಮಂತ್ರಿಗಲ್ಲ. ಬದಲಾಗಿ ಕೆಲಸವಾಡುವ ಅಭ್ಯರ್ಥಿಗೆ ಎನ್ನುವುದನ್ನು ಮತದಾರರು ಅರಿಯಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಗುರುವಾರ ಕಾಪು ವಿಧಾನಸಭಾಕ್ಷೇತ್ರದ ಹೆಜವಾಡಿ, ಪಡುಬಿದ್ರಿ, ಪಲಿಮಾರು, ಎಮಾಳ್, ಉಚ್ಚಿಲ, ಎಲ್ಲೂರು, ಮುದರಂಗಡಿ, ಶಿರ್ವ, ಕಳತ್ತೂರು, ಕುತ್ಯಾರು, ಮಜೂರಿನಲ್ಲಿ ಕಾರ್ಯಕರ್ತರ ಸಭೆಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರಬಲವಾದ ಪ್ರತಿಪಕ್ಷವೂ ಬೇಕು

ಒಳ್ಳೆಯ ಸರ್ಕಾರ ಬೇಕು. ಅದರೊಂದಿಗೆ ಪ್ರಬಲವಾದ ಪ್ರತಿಪಕ್ಷವೂ ಬೇಕಾಗುತ್ತದೆ. ಅದಕ್ಕಾಗಿ ಒಳ್ಳೆಯ ಪ್ರತಿನಿಧಿಯನ್ನು ಆರಿಸಿ ಕಳುಹಿಸಬೇಕಾದ ಅಗತ್ಯವಿದೆ. ಜನರಿಗೆ ಯಾವುದೇ ಸೌಲಭ್ಯಗಳು ಹತ್ತಿರದಲ್ಲೇ ಸಿಗಬೇಕು ಎನ್ನುವ ಉದ್ದೇಶದಿಂದ ನಾನು ಮಂತ್ರಿಯಾಗಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿಯನ್ನು ಪ್ರತ್ಯೇಕಿಸಲಾಗಿತ್ತು. ಇದರಿಂದಾಗಿ ಉಡುಪಿ ಜಿಲ್ಲೆ ಇಷ್ಟೊಂದು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದರು.

ಲೇವಡಿ ಮಾಡಿದವರಿಗೆ ಉತ್ತರ ನೀಡಲಾಗಿದೆ

ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಅಭ್ಯರ್ಥಿಗಳು ಪುಸ್ತಕದಲ್ಲಿ ಇಟ್ಟ ನವಿಲು ಗರಿ ಎಂದು ಲೇವಡಿ ಮಾಡಿದ್ದರು. ಆದರೆ ಈಗ ನವಿಲು ಗರಿ ಮರಿ ಹಾಕಿದ್ದಾ ಅಥವಾ ನವಿಲು ಮೊಟ್ಟೆ ಇಟ್ಟು ಮರಿ ಮಾಡಿದ್ದಾ ಎನ್ನುವುದಕ್ಕೆ ಅವರೇ ಉತ್ತರ ನೀಡಬೇಕಾಗಿದೆ. ಕಾಂಗ್ರೆಸ್ ಸರ್ಕಾರ ಮಾತನ್ನು ಉಳಿಸಿಕೊಳ್ಳುವ ಕೆಲಸ ಮಾಡಿದೆ. ಈ ಚುನಾವಣೆ ಗೆಲುವು ಕಾಂಗ್ರೆಸ್ ಕಾರ್ಯಕರ್ತರದ್ದು ಎಂಬುದಾಗಿ ಅರಿತು ಒಟ್ಟಾಗಿ ಕೆಲಸ ಮಾಡೋಣ ಎಂದರು.

ರಾಜ್ಯಕ್ಕೆ ಅನುದಾನ ತರುವಲ್ಲಿ ಬಿಜೆಪಿ ಸಂಸದರು ವಿಫಲ

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ತರುವಲ್ಲಿ ಬಿಜೆಪಿಯ ಸಂಸದರು ಸಂಪೂರ್ಣ ವಿಫಲರಾಗಿದ್ದು, ರಾಜ್ಯದ ವಿರುದ್ಧ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇವಲ ಸುಳ್ಳು ಹೇಳಿಕೊಂಡು ಜನರನ್ನು ಮರುಳು ಮಾಡುವ ಬಿಜೆಪಿಯನ್ನು ಜನರು ತಿರಸ್ಕರಿಸಿ ಸಜ್ಜನ ಹಾಗೂ ಸಂಸತ್ತಿನಲ್ಲಿ ಕ್ಷೇತ್ರಕ್ಕೆ ಉತ್ತಮ ದನಿಯಾಗಬಲ್ಲ ಜಯಪ್ರಕಾಶ್ ಹೆಗ್ಡೆ ಅವರನ್ನು ಗೆಲ್ಲಿಸಬೇಕಾಗಿದೆ ಎಂದರು.

ಮುಖಂಡರಾದ ಅಡ್ವೆ ನವೀನ್ ಚಂದ್ರ ಸುವರ್ಣ, ಯಶ್ವಂತ್ ಕುಕ್ಯಾನ್, ಸುನೀಲ್ ಬಂಗೇರಾ, ಸುಕುಮಾರ್ ಪಡುಬಿದ್ರಿ, ನವೀನ್ ಚಂದ್ರ ಶೆಟ್ಟಿ, ಕರುಣಾಕರ ಪೂಜಾರಿ, ದಿವಾಕರ್ ಶೆಟ್ಟಿ, ರಮೀಜ್ ಹುಸೈನ್, ಸುಧೀರ್ ಕರ್ಕೇರಾ, ಪ್ರಶಾಂತ್ ಜತ್ತನ್ನ, ಮೆಲ್ವಿನ್ ಡಿಸೋಜಾ, ಗುಲಾಮ್ ಮೊಹಮ್ಮದ್, ಅಜೀಜ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net