ಓಣಂ ಚೆಂಡುಮಲ್ಲಿಗೆ ಬಿತ್ತನೆ

Ksd_Onam Jasmin
Published on

ಕಾಸರಗೋಡು: ಸರ್ವಶಿಕ್ಷ ಕೇರಳ, ಹೊಸದುರ್ಗ ಬಿಆರ್‌ಸಿ ಹಾಗೂ ಬಾನಂ ಸರ್ಕಾರಿ ಪ್ರೌಢಶಾಲೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾನಂ ಸ್ಥಳೀಯ ಕಲಿಕಾ ಕೇಂದ್ರ ಓಣಂಗೆ ಒಂದು ಬುಟ್ಟಿ ಹೂವು ಎಂಬ ಉದ್ದೇಶದಿಂದ ಚೆಂಡುಮಲ್ಲಿಗೆ ಕೃಷಿ ಆರಂಭಿಸಿದೆ.

ಪರಪ್ಪ ಬ್ಲಾಕ್ ಪಂಚಾಯಿತಿ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್ ಹೂವಿನ ನಾಟಿಗೆ ಚಾಲನೆ ನೀಡಿದರು. ಹೊಸದುರ್ಗ ಬಿ.ಪಿ.ಸಿ ಡಾ.ಕೆ.ವಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಪಿ.ಮನೋಜ್ ಕುಮಾರ್, ಹಿರಿಯ ಸಹಾಯಕ ಪಿ.ಕೆ.ಬಾಲಚಂದ್ರನ್, ಸಿಬ್ಬಂದಿ ಕಾರ್ಯದರ್ಶಿ ಕೆ.ಭಾಗ್ಯೇಶ್, ಅನೂಪ್ ಪೆರಿಯಾಲ್, ಎಂ.ಲತಾ, ಟಿ.ಎನ್.ಪ್ರವೀಣಕುಮಾರ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಸಿ.ಕೋಮಲವಳ್ಳಿ ಸ್ವಾಗತಿಸಿ. ವಿ.ಎನ್.ಮಿನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net