ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು

Ksd_Wayanad
Published on

ಕಾಸರಗೋಡು: ವಯನಾಡು ಜಿಲ್ಲೆಯ ಮುಂಡಕೈ-ಚೂರಲ್‌ಮಲೆ ಭೂಕುಸಿತದಿಂದ ಸಂಕಷ್ಟ ಎದುರಿಸುತ್ತಿರುವವರಿಗಾಗಿ ಕಾಸರಗೋಡಿನ ಜನತೆ ಕೈಜೋಡಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರನ್ನು ಕಾಸರಗೋಡು ಕಚೇರಿಯಲ್ಲಿ ಭೇಟಿ ಮಾಡಿ ಹಲವು ಮಂದಿ ಸಿಎಂಡಿಆರ್‌ಎಫ್‌ಗೆ ದೇಣಿಗೆ ನೀಡಿದರು.

ಪೆರಿಯಾ ಸರ್ಕಾರಿ ಉನ್ನತ ಮಾಧ್ಯಮಿಕ ಶಾಲೆ 1995-96 ಎಸ್ಸೆಸ್ಸೆಲ್ಸಿ ಬ್ಯಾಚ್ ಪೂರ್ವವಿದ್ಯಾರ್ಥಿಗಳು 30,500 ರೂ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು. ಸಂಘ ಅಧ್ಯಕ್ಷ ರತೀಶ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ದೇಣಿಗೆ ಹಸ್ತಾಂತರಿಸಲಾಯಿತು.

ಕುತ್ತಿಕೋಲ್ ಕೃಷಿಕ ಕ್ಷೇಮಾಭಿವೃದ್ಧಿ ಸಹಕಾರ ಸಂಘದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಸಾವಿರ ರೂ.ದೇಣಿಗೆ ಅಧ್ಯಕ್ಷ ಸಿ. ಬಾಲನ್ ನೇತೃತ್ವದಲ್ಲಿ ಕೆ.ಇನ್ಬಾಶೇಖರ್ ಅವರಿಗೆ ಹಸ್ತಾಂತರಿಸಲಾಯಿತು. ಡಿವೈಎಫ್‌ಐ ಚೆನ್ನಿಕರ ಘಟಕ ಸಮಿತಿಯಿಂದ ಸಂಗ್ರಹಿಸಿದ 21 ಸಾವಿರ ರೂ.ಮೊತ್ತ ಡಿವೈಎಫ್‌ಐ ಬ್ಲಾಕ್ ಅಧ್ಯಕ್ಷ ಮಿಥುನ್ ರಾಜ್ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು. ಚೆನ್ನಿಕರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಸಂಗ್ರಹಿಸಿದ 25 ಸಾವಿರ ರೂ., ಕುತ್ತಿಕೋಲ್ ಶ್ರೀ ತಂಬುರಾಟಿ ಭಗವತಿಕ್ಷೇತ್ರ ಸಮಿತಿ ಸಂಗ್ರಹಿಸಿದ 25 ಸಾವಿರ ರೂ. ಮೊತ್ತವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net