ಪೊಸೋಟು ಜಮಾಅತ್ ಆಡಳಿತ ಸಮಿತಿ ಚುನಾವಣೆ

New Project (1)
Published on

ಮಂಜೇಶ್ವರ: ಪೊಸೋಟು ಜಮಾಅತ್ ಆಡಳಿತ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜಮಾಅತ್ ನಿಕಟಪೂರ್ವ ಅಧ್ಯಕ್ಷ ಆರ್.ಕೆ.ಬಾವ ಅವರನ್ನು ಬೆಂಬಲಿಸುವ 27 ಮಂದಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪೊಸೋಟು ಜಮಾಅತ್ ಆಡಳಿತ ಸಮಿತಿಯಲ್ಲಿ ಕೆಲವೊಂದು ಮಂದಿ ವಿವಾದವನ್ನೆಬ್ಬಿಸಿ ಅದು ವಕ್ಫ್ ಮೆಟ್ಟಲೇರಿತ್ತು. ಇಲ್ಲಿಯೂ ಸಮಾಧಾನಗೊಳ್ಳದ ಅತೃಪ್ತರು ಜಮಾಅತ್ ಸಮಿತಿ ವಿರುದ್ಧ ಟ್ರಿಬ್ಯೂನಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಕೊನೆಗೆ ಹೈಕೋರ್ಟ್ ಸೇರಿದಂತೆ ಕೋರ್ಟ್ ಕಟಕಟೆ ಹತ್ತಿದ್ದು, ಹೈಕೋರ್ಟ್ ನಿರ್ದೇಶನ ಪ್ರಕಾರ ಭಾನುವಾರ ಚುನಾವಣೆಗೆ ದಿನ ನಿಗದಿಪಡಿಸಲಾಗಿತ್ತು.

ಚುನಾವಣಾಧಿಕಾರಿ ಜಿಲ್ಲಾ ನಿವೃತ್ತ ನ್ಯಾಯಾಧೀಶ ಶಂಕರನ್ ನಾಯರ್ ಹಾಗೂ ವಕ್ಫ್ ಬೋರ್ಡ್ ನೇಮಕಗೊಳಿಸಿದ ಮುತವಲ್ಲಿ ಸಯ್ಯದ್ ಮುಹಿನುದ್ದೀನ್ ತಂಳ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಚುನಾವಣೆ ನಡೆದಿದೆ. ಜಯ ಗಳಿಸಿದ ಸ್ಪರ್ಧಾಳುಗಳನ್ನು ದರ್ಗಾ ಶರೀಫ್‌ಗೆ ಮೆರವಣಿಗೆ ಮೂಲಕ ಕೊಂಡೊಯ್ದು ವಿಜಯೋತ್ಸವ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net