ಮಿಲ್ಮಾ ಹೈನುಗಾರರ ಉದ್ಯಮ ಸಂಸ್ಥೆ : ಕೆ.ಎಸ್.ಮಣಿ ಅಭಿಮತ

New Project
Published on

ಪೆರ್ಲ: ಕೇರಳದಲ್ಲಿ 46 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಿಲ್ಮಾ 10.5 ಲಕ್ಷಕ್ಕೂ ಹೆಚ್ಚು ಹೈನುಗಾರರ ಸ್ವಂತ ಉದ್ಯಮ ಸಂಸ್ಥೆಯಾಗಿದೆ ಎಂದು ಮಿಲ್ಮಾ ಅಧ್ಯಕ್ಷ ಕೆ.ಎಸ್.ಮಣಿ ಹೇಳಿದರು.

ಮಲಬಾರ್ ಮಿಲ್ಮಾ ಸಹಕಾರಿ ಕ್ಷೀರೋತ್ಪಾದಕ ಯೂನಿಯನ್ ಅಂಗ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕ್ಷೀರ ಕೃಷಿಕರಿಗೆ ಮನೆ ನಿರ್ಮಿಸಿಕೊಡುವ ಯೋಜನೆಯಡಿ ವಾಣಿನಗರದ ಹರಿಣಾಕ್ಷಿ ಅವರ ಮನೆಯ ಕೀಲಿಕೈ ಹಸ್ತಾಂತರಿಸಿ ಮಾತನಾಡಿದರು.

ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಕಚೇರಿ ಜಿಲ್ಲಾ ಘಟಕ ಮುಖ್ಯಸ್ಥ ಶಾಜಿ ವಿ. ಮಿಲ್ಮಾದ ವಿವಿಧ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಮಿಲ್ಮಾ ನಿರ್ದೇಶಕ ಪಿ.ಪಿ.ನಾರಾಯಣನ್ ಶೈಕ್ಷಣಿಕ ಧನಸಹಾಯ ವಿತರಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯರಾದ ಬಟ್ಟು ಶೆಟ್ಟಿ, ರಾಮಚಂದ್ರ ಎಂ., ನರಸಿಂಹ ಪೂಜಾರಿ ಎಸ್.ಬಿ., ಮಂಜೇಶ್ವರ ಬ್ಲಾಕ್ ಡಿಇಒ ಅಜಯನ್ ಎಸ್., ಪೆರ್ಲ ಕ್ಷೀರೋತ್ಪಾದಕ ಸಂಘ ಕಾರ್ಯದರ್ಶಿ ಚೇತನಾ ಕೆ. ಶುಭಹಾರೈಸಿದರು. ಎಣ್ಮಕಜೆ ಗ್ರಾಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಡ್ರೆ ಕ್ಷೀರೋತ್ಪಾದಕ ಸಂಘ ನಿರ್ದೇಶಕ ಗೋವಿಂದ ಭಟ್ ಉಪಸ್ಥಿತರಿದ್ದರು. ಪಡ್ರೆ ಕ್ಷೀರೋತ್ಪಾದಕ ಸಂಘ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಸ್ವಾಗತಿಸಿದರು. ಎಂಎಂಪಿಒ ಷಲ್ನ ಅರಯಾಕಂಡಿ ವಂದಿಸಿದರು. ಸುಧೀರ್ ರೈ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net