ಜಲೋತ್ಸವ ಪ್ರವಾಸೋದ್ಯಮದ ಮೈಲಿಗಲ್ಲು: ಸ್ಪೀಕರ್ ಎ.ಎನ್.ಶಂಸೀರ್ ಮೆಚ್ಚುಗೆ

Ksd_tourism
Published on

ಕಾಸರಗೋಡು: ಮಲಬಾರ್ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಜಲೋತ್ಸವ ಒಂದು ಮೈಲಿಗಲ್ಲಾಗಿದ್ದು, ಕರಾವಳಿಯ ಪ್ರವಾಸೋದ್ಯಮವನ್ನು ಬದಲಾಯಿಸಿದೆ ಎಂದು ಕೇರಳ ವಿಧಾನಸಭಾ ಸ್ಪೀಕರ್ ಎ.ಎನ್.ಶಂಸೀರ್ ಹೇಳಿದರು.

ನೀಲೇಶ್ವರ ಅಚ್ಚಾಂತುರ್ತಿಯಲ್ಲಿ ಉತ್ತರ ಮಲಬಾರ್ ಜಲೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಅಪರ ಜಿಲ್ಲಾಧಿಕಾರಿ ಪ್ರತೀಕಜೈನ್, ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ, ಚೆರುವತ್ತೂರು ಗ್ರಾಪಂ ಅಧ್ಯಕ್ಷೆ ಸಿ.ವಿ.ಪ್ರಮೀಳಾ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net