

ಬೆಳ್ತಂಗಡಿ: ಅಟ್ಲಾಜೆ ಕ್ರಿಕೆಟರ್ಸ್ ವತಿಯಿಂದ ಸಹಾಯಾರ್ಥವಾಗಿ ನಿಶಾಂತ್ ಟ್ರೋಫಿ ಸೀಸನ್-4 ಕ್ರಿಕೆಟ್ ಪಂದ್ಯಾಟ ಅಟ್ಲಾಜೆ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ದೇಜಪ್ಪ ಪೂಜಾರಿ ಉದ್ಘಾಟಿಸಿದರು. ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಅಧ್ಯಕ್ಷತೆ ವಹಿಸಿದ್ದರು.
ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್, ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಎಚ್.ಎಸ್, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕರಾದ ಗುರುಪ್ರಸಾದ್ ಹೆಗ್ಡೆ, ವಿಶ್ವನಾಥ ಹೊಳ್ಳ, ದಿನೇಶ್ ಪಿ.ಕೆ, ಉದ್ಯಮಿ ಅನಂತರಾಮ ಹೊಳ್ಳ, ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸಂಚಾಲಕ ಹರೀಶ್ ವೈ.ಚಂದ್ರಮ, ಸರ್ವೋದಯ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಪೂಜಾರಿ, ಬಳಂಜ ಗ್ರಾ.ಪಂ. ಮಾಜಿ ಅಧ್ಯಕ್ಷೆ ರತ್ನಾವತಿ, ಬಳಂಜ ಗ್ರಾ.ಪಂ. ಉಪಾಧ್ಯಕ್ಷ ಯಶೋಧರ ಶೆಟ್ಟಿ, ಸದಸ್ಯ ಬಾಲಕೃಷ್ಣ ಪೂಜಾರಿ, ಯುವ ಉದ್ಯಮಿ ಜಗದೀಶ್ ಪೂಜಾರಿ, ಮುಖ್ಯಶಿಕ್ಷಕ ಪ್ರಮೋದ್ ಪೂಜಾರಿ, ಬಳಂಜ ಗ್ರಾ.ಪಂ. ಸದಸ್ಯರು, ತಂಡದ ಮಾಲೀಕರು ಉಪಸ್ಥಿತರಿದ್ದರು.
ಲತೇಶ್ ಪೆರಾಜೆ, ಪ್ರಣಾಮ್ ಶೆಟ್ಟಿ ನೇತೃತ್ವವಹಿಸಿದ್ದರು. ಅಟ್ಲಾಜೆ ಕ್ರಿಕೆಟರ್ಸ್ ಸದಸ್ಯರು ಸಹಕರಿಸಿದರು. ಪ್ರಸಾದ್, ಗುರುಪ್ರಸಾದ್ ವೀಕ್ಷಣಾ ವಿವರಣೆ ಮಾಡಿದರು. ನಿತಿನ್ ಸ್ವಾಗತಿಸಿ, ವಂದಿಸಿದರು.
ಉಳಿಕೆ ಮೊತ್ತದಿಂದ ಅಶಕ್ತರಿಗೆ ನೆರವು
ಅಟ್ಲಾಜೆ ಕ್ರಿಕೆಟರ್ಸ್ ವತಿಯಿಂದ ಅವಘಡದಲ್ಲಿ ಅಗಲಿದ ನಿಶಾಂತ್ ಅವರ ಸ್ಮರಣಾರ್ಥ ನಿಶಾಂತ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಮಾಡಿ ಅಶಕ್ತ ಕುಟುಂಬಗಳಿಗೆ ನೆರವು, ವೈದ್ಯಕೀಯ ನೆರವು, ಆರ್ಥಿಕ ಸಹಕಾರ ಮುಂತಾದ ಸೇವೆ ನೀಡುತ್ತಾ ಬರಲಾಗುತ್ತಿದೆ. ಲತೇಶ್ ಪೆರಾಜೆ, ಪ್ರಣಾಮ್ ಶೆಟ್ಟಿ, ಯಶೋಧರ ಶೆಟ್ಟಿ ನೇತೃತ್ವ ವಹಿಸುತ್ತಿದ್ದಾರೆ.