

ಮಂಜೇಶ್ವರ: ಉದಿನೂರು ಉನ್ನತ ಪ್ರೌಢಶಾಲೆಯಲ್ಲಿ ಜರುಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಮೀಯಪದವು ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢಶಾಲೆಯ ವಿದ್ಯಾರ್ಥಿ ಗಣೇಶ ಶರ್ಮ ಹಿಂದಿ ಕವಿತಾ ರಚನೆಯಲ್ಲಿ ಕೇರಳ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬೆಜ್ಜಂಗಳ ನಿವಾಸಿ ಶಿವಕುಮಾರ ಪಟ್ಟಾಜೆ ಹಾಗೂ ಶಿಕ್ಷಕಿ ವಾಣಿಶ್ರೀ ಅವರ ಪುತ್ರ. ಶಾಲಾ ಮುಖ್ಯಶಿಕ್ಷಕಿ ಮೃದುಲಾ ಕೆ.ಎಂ ಹಾಗೂ ಶಾಲಾ ಸಂಚಾಲಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಭಿನಂದಿಸಿದ್ದಾರೆ.