ಸ್ವಾಭಿಮಾನದ ಬದುಕಿಗೆ ಹೊಲಿಗೆ ವೃತ್ತಿ : ಪ್ರವೀಣ್ ಕುಮಾರ್ ಬಣ್ಣನೆ

New Project (13)
Published on

ಸುಳ್ಯ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಜ್ಜಾವರ ವಲಯದ ಮಂಡೆಕೋಲು ಕಾರ್ಯಕ್ಷೇತ್ರದ ಶಕ್ತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಶುಕ್ರವಾರ ಹೊಲಿಗೆ ತರಬೇತಿ ಆರಂಭಗೊಂಡಿತು.

ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಹೊಲಿಗೆ ವೃತ್ತಿ ಅತ್ಯುತ್ತಮ ದಾರಿಯಾಗಿದೆ. ಮಹಿಳೆಯರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ಕೇಂದ್ರ ಸಮಿತಿ ಒಕ್ಕೂಟ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಯಾದವ ಸಭಾಭವನದ ಟ್ರಸ್ಟ್ ಅಧ್ಯಕ್ಷ ಶ್ರೀರಾಮಚಂದ್ರ ಕೇನಾಜೆ, ಹೊಲಿಗೆ ತರಬೇತುದಾರೆ ಸಾವಿತ್ರಿ ಮೊದಲಾದವರು ಉಪಸ್ಥಿತರಿದ್ದರು.

ಹೊಲಿಗೆ ತರಬೇತಿ ತರಗತಿ ಮುಂದಿನ ಮೂರು ತಿಂಗಳ ಕಾಲ ನಡೆಯಲಿದ್ದು ಯೋಜನೆಯ ಮಹಿಳಾ ಸದಸ್ಯರು ಅವಕಾಶ ಪಡೆದುಕೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net