

ಕುಂದಾಪುರ: ಶ್ರೀ ಸೀತಾರಾಮಚಂದ್ರ ದೇವಸ್ಥಾನದ ನವೀಕೃತ ಶಿಲಾಮಯ ದ್ವಾರಮಂಟಪ ಹಾಗೂ ಗರ್ಭಗುಡಿಯ ರಜತ ಕವಚದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಬಿಡುಗಡೆಗೊಳಿಸಲಾಯಿತು.
ಕುಂದಾಪುರ ರಾಮಕ್ಷತ್ರೀಯ ಸಂಘ ಅಧ್ಯಕ್ಷ ಲಕ್ಷ್ಮೀಶ ಹವಲ್ದಾರ್, ಕಾರ್ಯದರ್ಶಿ ಕೆ.ನಾಗರಾಜ್ ನಾಯ್ಕ, ಸದಸ್ಯರಾದ ಡಿ.ಸತೀಶ್, ಜನಾರ್ದನ್ ರಾವ್, ರಾಧಾಕೃಷ್ಣ ಯು., ರಾಮಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷೆ ಸರೋಜಾ ಅರುಣ್ ಕುಮಾರ್, ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ಆನಂದ ಕೆರಾಡಿ, ರಮಾನಾಥ್ ನಾಯ್ಕ, ಹಾಡಿಮನೆ ಶಂಕರ್ ಶೇರಿಗಾರ್, ಭೂಷಣ್, ನೇರಂಬಳ್ಳಿ ಪ್ರಭಾಕರ್, ದೇವರಾಯ ಬಾಣನಮನೆ, ರಾಜೇಶ್ ಗಂಗೊಳ್ಳಿ ಮುಂತಾದವರು ಉಪಸ್ಥಿತರಿದ್ದರು.