ಭಗವಂತನು ಶ್ರೀರಾಮನ ಅವತಾರದಲ್ಲಿ ಉಪದೇಶ

upadesh
Published on

ಕುಂದಾಪುರ: ಧರ್ಮ, ಧಾರ್ಮಿಕ ಜೀವನದ ಪ್ರಾಮುಖ್ಯತೆಯನ್ನು ಭಗವಂತನು ಶ್ರೀರಾಮನ ಅವತಾರದಲ್ಲಿ ಉಪದೇಶ ಮಾಡಿದ್ದಾನೆ. ಭಗವಂತನ ಒಂದೊಂದು ಅವತಾರಕ್ಕೂ ತನ್ನದೇ ಆದ ವೈಶಿಷ್ಟೃ ಇದೆ. ಎಲ್ಲ ಅವತಾರಗಳ ಮೂಲಉದ್ದೇಶ ಧರ್ಮೋದ್ಧಾರ, ಧರ್ಮದ ರಕ್ಷಣೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀಮದ್ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ ಹೇಳಿದರು.

ಕುಂದಾಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶಿಲಾಮಯ ದ್ವಾರ ಮಂಟಪ, ಶ್ರೀ ದೇವರ ಗರ್ಭಗುಡಿಯ ರಜತ ಕವಚ ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ರಾಮಕ್ಷತ್ರಿಯ ಸಂಘ ಅಧ್ಯಕ್ಷ ಕೆ.ಲಕ್ಷ್ಮೀಶ ಹವಾಲ್ದಾರ್ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಶೃಂಗೇರಿ ಶ್ರೀ ಶಾರದಾ ಪೀಠಂನ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ, ವಿಶ್ವರಾಮಕ್ಷತ್ರಿಯ ಸಂಘ ಅಧ್ಯಕ್ಷ ಎಚ್.ಆರ್.ಶಶಿಧರ ನಾಯ್ಕ, ಉದ್ಯಮಿ ದತ್ತಾನಂದ, ಉಪಾಧ್ಯಕ್ಷ ದೇವರಾಯ ಬಾಣ, ನಾಗಭೂಷಣ ಎಸ್., ದೇವಕಿ ಪಿ.ಸಣ್ಣಯ್ಯ, ರಾಧಾಕೃಷ್ಣ ಯು., ಶಂಕರ ಶೇರೆಗಾರ್, ಕೆ.ನಾಗರಾಜ ತಲ್ಲೂರು, ಕೆ.ಚಂದ್ರಶೇಖರ ನಾಯ್ಕ, ಆನಂದ ರಾವ್ ಕೆರಾಡಿ, ಸಂಘ ಸದಸ್ಯರು, ಯುವಕ ಮಂಡಲ, ಮಹಿಳಾ ಮಂಡಲ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕೋಶಾಧಿಕಾರಿ ಡಿ.ಸತೀಶ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಾಗರಾಜ ನಾಯ್ಕ ವಂದಿಸಿದರು.

ಪ್ರತಿಯೊಂದು ಯುಗದಲ್ಲೂ ಭಗವಂತನು ವಿಶೇಷ ಅವತಾರ ತಾಳಿ ಧರ್ಮ ಸಂರಕ್ಷಣೆ ಮಾಡಿದ್ದಾನೆ. ನಮ್ಮ ಧರ್ಮ ಆಚರಣೆ ಮಾಡಿ ನಮ್ಮ ಮಕ್ಕಳಿಗೆ ಉಪದೇಶ ಮಾಡಬೇಕು. ನಮ್ಮ ಸನಾತನ ಹಿಂದು ಧರ್ಮದ ಸಂರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಪರಿಸ್ಥಿತಿಗನುಗುಣವಾಗಿ ನಮ್ಮನ್ನು ನಾವು ತಯಾರು ಮಾಡಿಕೊಂಡು ನಮ್ಮ ಧರ್ಮ ಉದ್ಧಾರ, ಸಂರಕ್ಷಣೆ ಮಾಡಿಕೊಳ್ಳಬೇಕಿದೆ. -ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿ https://www.vijayavani.net/a-grand-start-to-the-dhakkebali-festival https://www.vijayavani.net/shedimane-narayana-master-achievement-award-presentation

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net