ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದಲ್ಲಿ ಜೀರ್ಣಾಷ್ಟಬಂಧ ಪುರಸ್ಸರ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಪೂರ್ವಭಾವಿಯಾಗಿ ಬುಧವಾರ ಮುಹೂರ್ತ ದರ್ಶನ ಸೇವೆ ಜರುಗಿತು.
ಬೆಳಗ್ಗೆ ಫಲಾನ್ಯಾಸ ಪೂರ್ವಕ ಗುರುಗಣಪತಿ ಪೂಜೆ, ಸಂಕಲ್ಪ, ಪುಣ್ಯಾಹವಾಚನ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ಪುರೋಹಿತ ರಾಘವೇಂದ್ರ ಅಡಿಗ ನೇತೃತ್ವದಲ್ಲಿ ನೆರವೇರಿತು. ನಾಗದೇವರ ಪಾತ್ರಿ ರವಿರಾಜ್ ಭಟ್ ಅಂಪಾರು ಅವರಿಂದ ದರ್ಶನ ಸೇವೆ ನಡೆಯಿತು.
ಶ್ರೀ ನಾಗ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಉಮೇಶ ಎಲ್.ಮೇಸ್ತ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಣಪತಿ ಮೇಸ್ತ, ಗೌರವಾಧ್ಯಕ್ಷ ಸುರೇಶ ಖಾರ್ವಿ, ಕಾರ್ಯದರ್ಶಿ ಶ್ರೀಧರ ಮೇಸ್ತ, ಗುಜ್ಜಾಡಿ ಗ್ರಾಪಂ ಸದಸ್ಯ ಹರೀಶ ಮೇಸ್ತ, ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜ ಅಧ್ಯಕ್ಷ ರಾಮಚಂದ್ರ ಶಿರೂರ್‌ಕರ್, ಬೆಣ್ಗೆರೆ ಶ್ರೀ ಸುಬ್ರಹ್ಮಣ್ಯೇಶ್ವರ ಯುತ್ ಕ್ಲಬ್ ಅಧ್ಯಕ್ಷ ವಿಶ್ವನಾಥ ಮೇಸ್ತ, ಕಾರ್ಯದರ್ಶಿ ರಾಮದಾಸ ಮೇಸ್ತ, ಮಹಿಳಾ ಮಂಡಳಿ ಅಧ್ಯಕ್ಷೆ ಕುಸುಮಾ ಮೇಸ್ತ, ಮೋಹನ ಖಾರ್ವಿ, ಉಮಾನಾಥ ದೇವಾಡಿಗ ಗಂಗೊಳ್ಳಿ, ಚಾರೋಡಿ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು.