ಅಂತಾರಾಷ್ಟ್ರೀಯ ಯೋಗದಲ್ಲಿ ಧನ್ವಿಗೆ ಚಿನ್ನ

DHANVI
Published on

ಬೈಂದೂರು: ಥೈಲೆಂಡ್ ಯೂತ್ ಯೋಗ ಅಸೋಸಿಯೇಷನ್, ವರ್ಲ್ಡ್ ಯೂಥ್ ಯೋಗ ಫೆಡರೇಶನ್ ಹಾಗೂ ಶಿವಮೊಗ್ಗದ ವರ್ಷಿಣಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ಸಹಭಾಗಿತ್ವದಲ್ಲಿ ಥೈಲೆಂಡ್‌ನ ಪಟ್ಟಾಯದಲ್ಲಿ ಸೋಮವಾರ ನಡೆದ 6ನೇ ವರ್ಷದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆ ನಡೆಯಿತು. 11ರಿಂದ 15ನೇ ವಯೋಮಿತಿ ಒಳಗಿನ ಪೈಕಿ ಭಾರತದಿಂದ ಸ್ಪರ್ಧಿಸಿದ್ದ ಧನ್ವಿ ಪೂಜಾರಿ ಮರವಂತೆ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ವಿಜೇತರಾಗಿದ್ದಾರೆ. ಇವರು ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದು, ಮರವಂತೆಯ ಶಿವಾ ಮಾಸ್ತಿಮನೆ ಹಾಗೂ ಜ್ಯೋತಿ ಚಂದ್ರಶೇಖರ್ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net