ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ವಿಜಯವಾಣಿ- ದಿಗ್ವಿಜಯ ನ್ಯೂಸ್ ಆಯೋಜನೆಯ ವಾಕಾಥಾನ್​ಗೆ ಚಾಲನೆ

Walkthon 1
Published on

ಹುಬ್ಬಳ್ಳಿ: ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ರಾಜ್ಯದ ಪ್ರಮುಖ ಸುದ್ದಿವಾಹಿನಿ ದಿಗ್ವಿಜಯ 24*7 ನ್ಯೂಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿರುವ ವರ್ಲ್ಡ್ ಸ್ಕ್ವೇರ್​ ವಾಕಥಾನ್​ಗೆ ಚಾಲನೆ ನೀಡಲಾಗಿದೆ.

ಧಾರವಾಡ ಎಸಿಪಿ ಅನುಷಾ ಜಿ, ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ಅವರು ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ರಿಬ್ಬನ್​ ಕತ್ತರಿಸುವ ಮೂಲಕ ವಾಕ್​ಥಾನ್​​ಗೆ ಚಾಲನೆ ನೀಡಿದರು.

ವಿಆರ್​ಎಲ್​ ಮೀಡಿಯಾ ನಿರ್ದೇಶಕರಾದ ಶ್ರೀಮತಿ ವಾಣಿ ಸಂಕೇಶ್ವರ ಹಾಗೂ ವಿಆರ್​ಎಲ್​ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಭಾಗಿಯಾಗುವ ಮೂಲಕ ವಾಕಥಾನ್​ಗೆ ಸಾಥ್​ ನೀಡಿದ್ದಾರೆ. ​

ಮಹಿಳೆಯರ ಸಮಾನತೆಗಾಗಿ ನಡಿಗೆ ಎಂಬ ಘೋಷಣೆಯಡಿ ಇಂದು ಬೆಳಗ್ಗೆ 6.30ಕ್ಕೆ ಚನ್ನಮ್ಮ ವೃತ್ತದಿಂದ ಆರಂಭವಾಗಿರುವ ವಾಕ್​ಥಾನ್​ ದೇಸಾಯಿ ಸರ್ಕಲ್ ಮೂಲಕ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದವರೆಗೂ ಸಾಗಲಿದೆ. ವಾಕಥಾನ್​ ಉದ್ದಕ್ಕೂ ಹುಬ್ಬಳ್ಳಿಯ ಸುಳ್ಳ ಗ್ರಾಮದ ಕರಿಯಮ್ಮನದೇವಿ ಡೊಳ್ಳಿನ ಮೇಳ ಮೆರಗು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net