ಪಠ್ಯೇತರ ಚಟುವಟಿಕೆಯಿಂದ ಕಲಿಕೆಯಲ್ಲಿ ಆಸಕ್ತಿ

Btw_Prathiba-karanji
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ಪಠ್ಯೇತರವಾಗಿ ಚಟುವಟಿಕೆಗಳನ್ನು ರೂಪಿಸಿದಾಗ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ. ಪ್ರತಿಭೆಯನ್ನು ತೋರಿಸಲು ಇಂತಹ ವೇದಿಕೆಗಳು ಸಹಕಾರಿ ಎಂದು ಮಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಬ್ರಾಹಿಂ ಕೆ.ಹೇಳಿದರು.

ಶಾಲಾ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಮಾಣಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ಮಾಣಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕಲ್ಲಡ್ಕ ವಲಯ ಮಟ್ಟದ ಪ್ರತಿಭಾ ಕಾರಂಜಿ &2024ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರಿಯ ದಾನಿ ಪ್ರಪುಲ್ಲ ರೈ ಉದ್ಘಾಟಿಸಿದರು. ಮಾಣಿ ಗ್ರಾಪಂ ಸದಸ್ಯ ಬಾಲಕೃಷ್ಣ ಆಳ್ವ ಕೊಡಾಜೆ, ಸರ್ಕಾರಿ ನೌಕರರ ಸಂದ ಕಾರ್ಯದರ್ಶಿ ಸಂತೋಷ ಕುಮಾರ್​, ಮಾಣಿ ಗ್ರಾಪಂ ಉಪಾಧ್ಯಕ್ಷ ಸುಜಾತ, ಸದಸ್ಯರಾದ ಮೆಲ್ವಿನ್​ ಕಿಶೋರ್​ ಮಾರ್ಟಿಸ್​ ಕೊಡಾಜೆ, ಪ್ರೀತಿ ಡಿನ್ನಪಿರೇರಾ, ಸುದೀಪ್​ ಶೆಟ್ಟಿ, ನಾರಾಯಣ ಶೆಟ್ಟಿ, ರಮಣಿ, ಸೀತಾ, ಮಿತ್ರಾ, ಎಸ್​ಡಿಎಂಸಿ ಅಧ್ಯಕ್ಷ ಕುಶಾಲಪ್ಪ ಗೌಡ, ಉಪಾಧ್ಯೆ ಆಶಾಲತಾ, ಬಂಟ್ವಾಳ ತಾಲೂಕು ಶಿಕ್ಷಣ ಸಂಯೋಜಕಿ ಪ್ರತಿಮಾ, ಮಾಣಿ ಮತ್ತು ಬಾಳ್ತಿಲ ಸಮೂಹ ಸಂಪನ್ಮೂಲ ವ್ಯಕ್ತಿ ಸತೀಶ್​ ರಾವ್​, ಕಡೆಶಿವಾಲಯ ಸಮೂಹ ಸಂಪನ್ಮೂಲ ವ್ಯಕ್ತಿ ಸುಧಾಕರ್​, ಮುಖ್ಯಶಿಕ್ಷಕರ ಸಂದ ಕಾರ್ಯದರ್ಶಿ ಪುಟ್ಟರಂಗನಾಥ್​, ಪ್ರೌಢಶಾಲಾ ಶಿಕ್ಷಕರ ಸಂದ ಕೋಶಾಧಿಕಾರಿ ಧನರಾಜ್​, ಪಾಟ್ರಕೋಡಿ ಶಾಲೆ ಮುಖ್ಯಶಿಕ್ಷಕ ಉಮ್ಮರಗಿ ಶರಣಪ್ಪ, ಪ್ರೌಢಶಾಲೆ ಮುಖ್ಯಶಿಕ್ಷಕರ ಸಂದ ಅಧ್ಯಕ್ಷ ಕಿರಣ್​ ಕುಮಾರ್​ ವಿಟ್ಲ, ಪ್ರತಿಭಾ ಕಾರಂಜಿ ವಲಯ ನೋಡಲ್​ ಕಲ್ಲಡ್ಕ ಮಾದರಿ ಶಾಲೆಯ ಪದವೀಧರ ಮುಖ್ಯಶಿಕ್ಷಕ ಅಶ್ರಫ್​, ಮಾಣಿ ಶಾಲಾ ಮುಖ್ಯಶಿಕ್ಷಕಿ ಚಂದ್ರಾವತಿ, ಎಸ್​.ಡಿ.ಎಂ.ಸಿ ಸದಸ್ಯರು ಶಿಕ್ಷಕರು ಉಪಸ್ಥಿತರಿದ್ದರು.

ಶಿಕ್ಷಕಿ ಅಮೃತ ಸ್ವಾಗತಿಸಿ, ಶಿಕ್ಷಕಿ ಶೀಲಾವತಿ ವಂದಿಸಿ, ನಾಯಿಲ ಶಾಲಾ ಶಿಕ್ಷಕ ಡಿಕ್ಸನ್​ ಹಾಗೂ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮಾ ನಿರೂಪಿಸಿದರು. ಕಲ್ಲಡ್ಕ ವಲಯದ ವಿವಿಧ ಶಾಲೆಗಳಿಂದ 450 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು. ಮಾಣಿ ಬಾಲವಿಕಾಸ ಶಾಲೆ ಪ್ರಥಮ ಸಮಗ್ರ ಪ್ರಶಸ್ತಿ, ಕಲ್ಲಡ್ಕ ಶ್ರೀರಾಮ ಶಾಲೆ ದ್ವೀತಿಯ ಸಮಗ್ರ ಪ್ರಶಸ್ತಿ ಪಡೆದುಕೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net