ಮಂಜೇಶ್ವರ: ಕಾಂಗ್ರೆಸ್ ಪಕ್ಷದ ಮನಸ್ಥಿತಿ ದಲಿತ ವಿರೋಧಿ, ಅದಕಾಗಿಯೇ ಕಾಂಗ್ರೆಸ್ ಅಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ರನ್ನು ಚುನಾವಣೆಯಲ್ಲಿ ಪರಾಭವಗೊಳಿಸಿದ್ದು. ಇದೀಗ ಅಂಬೇಡ್ಕರ್ ಅವರ ಸಂವಿಧಾನಬದ್ಧ ಮೀಸಲಾತಿಯನ್ನು ವಿದೇಶದಲ್ಲಿ ಕುಳಿತು ರಾಹುಲ್ ಗಾಂಧಿ ತೆಗೆಯುವ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದು ಎಸ್.ಸಿ&ಎಸ್.ಟಿ ಮೋರ್ಚಾ ಕೇರಳ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯಾರ್ ಅಭಿಪ್ರಾಯಪಟ್ಟರು.
ಬಿಜೆಪಿ ಮಂಜೇಶ್ವರ ಮಂಡಲ ಸದಸ್ಯತ್ವ ಅಭಿಯಾನದ ಹೊಸಂಗಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ದಲಿತರನ್ನು ಬಿಜೆಪಿ ರಾಷ್ಟ್ರಪತಿ ಮಾಡಿದಾಗಲೂ ಕಾಂಗ್ರೆಸ್ ಸಮಾರಂಭ ಬಹಿಷ್ಕರಿಸಿದ್ದು, ಅದು ದಲಿತ ವಿರೋಧಿ ಪಕ್ಷ ಎಂಬುದಕ್ಕೆ ಸಾಕ್ಷಿ ಎಂದರು.
ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ.ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಉದ್ಘಾಟಿಸಿಡಿದರು. ಮುಖಂಡರಾದ ಮಣಿಕಂಠ ರೈ, ಸುಮಂಗಲ ಹೊಸಬೆಟ್ಟು, ಮಂಜುನಾಥ್ ಮುಳಿಗದ್ದೆ, ಜಯಲಕ್ಷಿ$್ಮ ಭಟ್, ಯಾದವ ಬಡಾಜೆ, ಕೋಡಿ ಶೇಖರ, ಚಂದ್ರಹಾಸ ಕೆ.ಮೊದಲಾದವರು ಉಪಸ್ಥಿತರಿದ್ದರು. ಯತಿರಾಜ್ ಸ್ವಾಗತಿಸಿ, ಕೆ.ವಿ.ಭಟ್ ವಂದಿಸಿದರು.