

ಬದಿಯಡ್ಕ: ಪ್ರಣವ್ ಫೌಂಡ್ಡೇನ್ ಹಾಗೂ ಆರ್.ವಿ.ಚಾರಿಟೆಬಲ್ ಟ್ರಸ್ಟ್ ಸಹಯೋಗದ ಪುಸ್ತಕ&2024, ಉಚಿತ ಕಲಿಕಾ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಎಡನೀರಿನ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಶಾಲೆಯ 90ಕ್ಕೂ ಅಧಿಕ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾ ಸಂಪತ್ತು ಸಕಲ ಐಶ್ವರ್ಯಗಳಿಗೂ ಮೂಲವಾಗಿದ್ದು, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಅನಾವರಣಗೊಳ್ಳಲು ಅಗತ್ಯವಿದೆ. ಕೊರತೆಗಳನ್ನು ನೀಗಿಸುವಲ್ಲಿ ಸಹೃದಯರ ಬೆಂಬಲದೊಂದಿಗೆ ವಿದ್ಯಾರ್ಥಿಗಳು ಮುನ್ನಡೆಯಬೇಕು. ನೆರವಿನ ಸಂಪೂರ್ಣ ಉಪಯೋಗ ಪಡೆದು ಬದುಕನ್ನು ಸಾರ್ಥಕಪಡಿಸಬೇಕು ಎಂದು ನುಡಿದು, ಫೌಂಡೇಷನ್ನ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯ ನಿವೃತ್ತ ವಿದ್ಯಾಧಿಕಾರಿ ವೇಣುಗೋಪಾಲ್, ನಿವೃತ್ತ ಪ್ರಾಚಾರ್ಯ ಪ್ರೊ.ಪುರುಷೋತ್ತಮ ಪುಣಿಂಚಿತ್ತಾಯ, ಪ್ರಣವ್ ಫೌಂಡೇಷನ್ನ ಟ್ರಸ್ಟಿ ಗುರುರಂಜನ ಪುಣಿಂಚಿತ್ತಾಯ, ವಿಜಯರಾಜ್ ಪಿ.ಮುಂತಾದವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಜ್ಯೋತಿಲಕ್ಷಿ$್ಮ ಭಟ್ ಸ್ವಾಗತಿಸಿ, ಚಂದ್ರಿಕಾ ಎಸ್.ವಂದಿಸಿದರು, ವೆಂಕಟಕೃಷ್ಣ ಕೆ.ನಿರೂಪಿಸಿದರು.