

ಕಡಬ: ವೈದ್ಯಕಿಯ ವೃತ್ತಿ ಉದ್ಯಮ ಅಲ್ಲ, ಸೇವೆ. ಆರೋಗ್ಯ ಸಮಸ್ಯೆಯ ನಿವಾರಿಸುವ ಜತೆಗೆ ಸಮಾಜದ ಆರೋಗ್ಯ ಕಾಪಾಡುವುದು ವೈದ್ಯ ವೃತ್ತಿಯಲ್ಲಿ ಅಡಕವಾಗಿದೆ ಎಂದು ಸುಳ್ಯ ವಿಧಾನಸಭಾ ೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಭಾನುವಾರ ಕಡಬ ತಾಲೂಕಿನ ಆಲಂಕಾರು ಪೇಟೆಯಲ್ಲಿರುವ ಶ್ರೀ ಮಾತಾ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡ ಶತಾ ಕ್ಲಿನಿಕ್ ಮತ್ತು ಕ್ಲಿನಿಕಲ್ ಲ್ಯಾಬೋರೇಟರಿಯ ಕ್ಲಿನಿಕ್, ಲ್ಯಾಬೋರೇಟರಿ ಹಾಗೂ ಜನರಲ್ ವಾರ್ಡ್ ಉದ್ಘಾಟಿಸಿ ಮಾತನಾಡಿದರು.
ವಾಸ್ತು ತ ಮಹೇಶ ಮುನಿಯಂಗಳ ದೀಪ ಪ್ರಜ್ವಲನೆ ಮಾಡಿ ಮಾತನಾಡಿ, ಉತ್ತಮ ಆರೋಗ್ಯ ಸೇವೆ ನೀಡಿದಾಗ ಅದರ ಪ್ರತಿಫಲದಿಂದ ಭವಿಷ್ಯ ಉಜ್ವಲವಾಗುತ್ತದೆ. ಹಳ್ಳಿ ಜನರಿಗೆ ಸೇವೆ ನೀಡಲು ಡಾ.ಕೃತಿ ಶೆಟ್ಟಿ ಮುಂದಾಗಿರುವುದು ಈ ಭಾಗದ ಜನರ ಸೌಭಾಗ್ಯ ಎಂದರು.
ಪುತ್ತೂರು ತಾಲೂಕು ಬಂಟರ ಸಂದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಹೊರರೋಗಿ ಕೊಠಡಿ ಉದ್ಘಾಟಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ಕಾರ್ಯದರ್ಶಿ ಸೇಸಪ್ಪ ರೈ ಕೆ, ಉಪ್ಪಿನಂಗಡಿ ಧನ್ವಂತರಿ ಕ್ಲಿನಿಕ್ನ ಡಾ.ನಿರಂಜನ್ ರೈ, ಆಲಂಕಾರು ದುರ್ಗಾಂಬಾ ವಿದ್ಯಾವರ್ಧಕ ಸಂದ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ರಾವ್ ನಗ್ರಿ, ಆಲಂಕಾರು ಮೂರ್ತೆದಾರ ಸಹಕಾರಿ ಸಂದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಒಕ್ಕಲಿಗ ಗೌಡ ಸೇವಾ ಸಂ ಆಲಂಕಾರು ವಲಯದ ಅಧ್ಯಕ್ಷ ಶಿವಣ್ಣ ಗೌಡ ಕಕ್ವೆ, ಆಲಂಕಾರು ಆಕಾರ್ ಅಸೋಸಿಯೇಟ್ಸ್ನ ಇಂಜಿನಿಯರ್ ಲಕ್ಷಿ$್ಮನಾರಾಯಣ ಅಲೆಪ್ಪಾಡಿ ಶುಭಹಾರೈಸಿದರು.
ಆಲಂಕಾರು ಗ್ರಾ.ಪಂ ಅಧ್ಯೆ ಸುಶೀಲಾ ಅಧ್ಯಕ್ಷತೆ ವಹಿಸಿದ್ದರು. ಮಾತಾ ಕಾಂಪ್ಲೆಕ್ಸ್ನ ಮಾಲೀಕ ಕುಶಾಲಪ್ಪ ಗೌಡ ಸುರುಳಿ, ವತ್ಸಲಾ ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು. ನಿವೃತ್ತ ಕೃಷಿ ಅಧಿಕಾರಿ ಪದ್ಮನಾಭ ಶೆಟ್ಟಿ ಸ್ವಾಗತಿಸಿದರು. ಕ್ಲಿನಿಕ್ನ ವೈದ್ಯೆ ಡಾ.ಕೃತಿ ಶೆಟ್ಟಿ ವಂದಿಸಿದರು. ಶಿಕ್ಷಕ ಪ್ರದಿಪ್ ಬಾಕಿಲ ನಿರೂಪಿಸಿದರು.
ಬೆಳೆಯುತ್ತಿರುವ ಆಲಂಕಾರು ಪೇಟೆಗೆ ಅಗತ್ಯವಾಗಿ ಇಂತಹ ಆರೋಗ್ಯ ಸೇವೆ ಬೇಕಿತ್ತು. ಅದನ್ನು ಪೂರೈಸಲು ಡಾ.ಕೃತಿ ಶೆಟ್ಟಿ ಮುಂದಾಗಿದ್ದಾರೆ. ಅವರ ಪಾಲಕರು ನೀಡಿದ ಸಂಸ್ಕಾರವನ್ನು ವೈದ್ಯ ವೃತ್ತಿಯಲ್ಲಿ ಅಳವಡಿಸಿಕೊಂಡು ಅಭಿವೃದ್ಧಿಯಾಗುವ ಭರವಸೆಯಿದೆ. ಹೇಮನಾಥ ಶೆಟ್ಟಿ ಕಾವು, ಪುತ್ತೂರು ತಾಲೂಕು ಬಂಟರ ಸಂದ ಅಧ್ಯಕ್ಷ
ಹೇಮನಾಥ ಶೆಟ್ಟಿ ಕಾವು, ಪುತ್ತೂರು ತಾಲೂಕು ಬಂಟರ ಸಂದ ಅಧ್ಯಕ್ಷ