ಅರಸಿನಮಕ್ಕಿಯಲ್ಲಿ ರಕ್ತದಾನ ಶಿಬಿರ

Kkd_blood-camp
Published on

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಅರಸಿನಮಕ್ಕಿಯ ಪ್ರಾ ಕೃ ಪ. ಸ. ಸಂ ನೇತೃತ್ವದಲ್ಲಿ ವಿವಿಧ ಸಂ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್​ ರಕ್ತದಾನ ಶಿಬಿರ ಸಂದ ಸಭಾಭವನದಲ್ಲಿ ನಡೆಯಿತು. ಉದ್ಯಮಿ ಧರ್ಣಪ್ಪ ಗೌಡ ಉದ್ಘಾಟಿಸಿದರು.

ಸಂದ ಅಧ್ಯಕ್ಷ ರಾಘವೇಂದ್ರ ನಾಯಕ್​ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್​ನ ಸದಸ್ಯ ಉದಯಶಂಕರ್​ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.

ಸೇವಾಧಾಮದ ಸ್ಥಾಪಕ ಕೆ.ವಿನಾಯಕ, ಡಾ.ಹರ್ಷಿತ ಸುವಿನ್​, ರಕ್ತನಿಧಿ ವಿಭಾಗದ ಜಿಲ್ಲಾ ಸಂಯೋಜಕ ಪ್ರವಿಣ್​ ಕುಮಾರ್​, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್​, ಶಿಬಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನ ಬಿ., ರೋಟರಿ ಕ್ಯಾಂಪ್ಕೋ ಬ್ಲಡ್​ ಬ್ಯಾಂಕ್​ನ ಮೆಡಿಕಲ್​ ಆಫೀಸರ್​ ಡಾ.ಕೆ.ಸೀತಾರಾಮ್​ ಭಟ್​ ಉಪಸ್ಥಿತರಿದ್ದರು. ನಿರ್ದೇಶಕ ಮುರಳೀಧರ್​ ಶೆಟ್ಟಿಗಾರ್​ ಸ್ವಾಗತಿಸಿದರು. ಸೇವಾಧಾಮದ ಸಿಬ್ಬಂದಿ ಮೋಹನ್​ ನಿರೂಪಿಸಿದರು. ಸಂದ ಅಧ್ಯಕ್ಷ ರಾಘವೇಂದ್ರ ನಾಯಕ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net