ಬಂಟ್ವಾಳ ಪಿಎಲ್​ಡಿ ಬ್ಯಾಂಕ್​ಗೆ 1.05 ಕೋ.ರೂ. ಲಾಭ

Btw_PLD-Bank
Published on

ಬಂಟ್ವಾಳ: ಬಂಟ್ಚಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ (ಪಿಎಲ್​ಡಿ ಬ್ಯಾಂಕ್​)ವಾರ್ಷಿಕ ಮಹಾಸಭೆ ಶನಿವಾರ ಬಿ.ಸಿ.ರೋಡಿನಲ್ಲಿ ನಡೆಯಿತು. ಬ್ಯಾಂಕಿನ ಅಧ್ಯಕ್ಷ ಅರುಣ್​ ರೋಶನ್​ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, 2023&24ನೇ ಸಾಲಿನಲ್ಲಿ ಬ್ಯಾಂಕ್​1.05 ಕೋಟಿ ರೂ.ಲಾಭ ಗಳಿಸಿದೆ ಎಂದು ತಿಳಿಸಿ ಸದಸ್ಯರಿಗೆ ಶೆ.11 ಡಿವಿಡೆಂಡ್​ ಘೋಷಿಸಿದರು.

ಪ್ರಸ್ತುತ 11303 ಸದಸ್ಯರನ್ನು ಹೊಂದಿರುವ ಬ್ಯಾಂಕ್​ನಲ್ಲಿ ಪಾಲು ಬಂಡವಾಳ 178.50 ಲಕ್ಷ ರೂ., 2024ರ ಮಾ. 31ರ ಅಂತ್ಯಕ್ಕೆ 37.36 ಲಕ್ಷ ರೂ.ೇಮ ನಿಧಿ, 146.66 ಲಕ್ಷ ರೂ.ಇತರ ನಿಧಿ ಹಾಗೂ 1974.96 ಲಕ್ಷ ರೂ. ಠೇವಣಿಯನ್ನು ಹೊಂದಿರುತ್ತದೆ ಎಂದು ತಿಳಿಸಿದರು.

ಬ್ಯಾಂಕ್​ ಶೇ. 94 ಸಾಲ ವಸೂಲಾತಿ ಸಾಧನೆ ಮಾಡಿದೆ. ದಣ ಕನ್ನಡ ಜಿಲ್ಲೆಯಲ್ಲಿರುವ ಭೂ ಬ್ಯಾಂಕ್​ಗಳ ಪೈಕಿ ಸಾಲ ವಸೂಲಾತಿಯಲ್ಲು ಬಂಟ್ವಾಳ ಭೂಬ್ಯಾಂಕ್​ ಪ್ರಥಮ ಸ್ಥಾನದಲ್ಲಿದೆ. ರಾಜ್ಯದ 183 ಪಿಎಲ್​ಡಿ ಬ್ಯಾಂಕುಗಳಲ್ಲಿ ಲಾಭ ಗಳಿಸಿದ ಕೆಲವೇ ಪಿಎಲ್​ಡಿ ಬ್ಯಾಂಕ್​ಗಳ ಪೈಕಿ ಬಂಟ್ವಾಳ ಭೂ ಬ್ಯಾಂಕ್​ ಕೂಡ ಒಂದಾಗಿದೆ ಎಂದರು.

2024&25ನೇ ಸಾಲಿನಲ್ಲಿ 15 ಕೋಟಿ ರೂ. ಸಾಲ ಹಂಚಿಕೆಯ ಗುರಿ ಹೊಂದಿದ್ದು, ಬ್ಯಾಂಕಿನ ಮಾಣಿ ಶಾಖೆಯಲ್ಲಿ ಸದಸ್ಯರಿಂದ ಠೇವಣಿ ಸಂಗ್ರಹಿಸಿ ಈ ಯೋಜನೆಯಲ್ಲಿ ಚಿನ್ನಾಭರಣ ಮೇಲಿನ ಸಾಲ ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ವಿವಿಧ ಯೋಜನೆಗಳಲ್ಲಿ ಕೃಷಿಯೇತರ ಸಾಲಗಳನ್ನು ವಿತರಿಸಲಾಗುತ್ತಿದೆ ಎಂದು ವಿವರಿಸಿದರು.

ನಿರ್ದೇಶಕರಾದ ಲಿಂಗಪ್ಪ ಪೂಜಾರಿ, ವಿಜಯಾನಂದ, ಸುಂದರ ಪೂಜಾರಿ, ಲೋಲಾ, ಲತಾ, ಚಂದ್ರಹಾಸ ಕರ್ಕೇರ, ಕೆ.ಸಂಜೀವ ಪೂಜಾರಿ ಬೊಳ್ಳಾಯಿ, ಹೊನ್ನಪ್ಪ ನಾಯ್ಕ್​ ಇದ್ದರು. ಬ್ಯಾಂಕಿನ ಸೇವೆಯಿಂದ ನಿವೃತ್ತರಾದ ಸಿಬ್ಬಂದಿ ಕಸ್ತೂರಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಉಪಾಧ್ಯಕ್ಷ ಚಂದ್ರಶೇಖರ ಬಂಗೇರ ಸ್ವಾಗತಿಸಿದರು. ವ್ಯವಸ್ಥಾಪಕ ಪದ್ಮನಾಭ ಜಿ.ಗತವರ್ಷದ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ರಾಜೇಶ್​ ಕುಮಾರ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net