ಜಯಂತಿ ದಿನವೇ ಗಾಂಧಿ-ಶಾಸ್ತ್ರಿ ಸೇರಿ ಹಲವು ಮಹನೀಯರಿಗೆ ಅಪಮಾನ; ತಹಶೀಲ್ದಾರ್​ ಕಚೇರಿ ಆವರಣದಲ್ಲೇ ದುಷ್ಕೃತ್ಯ!

Untitled 2
Published on

ಬೀದರ್: ಇಂದು ಮಹಾತ್ಮ ಗಾಂಧಿ, ಲಾಲ್​ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ. ನಾಡು ಮಾತ್ರವಲ್ಲದೆ, ದೇಶಾದ್ಯಂತ ಗಾಂಧಿ-ಶಾಸ್ತ್ರಿ ಅವರ ಫೋಟೋ, ಪ್ರತಿಮೆ, ಪುತ್ಥಳಿಗಳಿಗೆ ಹೂ-ಹೂಮಾಲೆಗಳನ್ನು ಅರ್ಪಿಸಿ ಗೌರವ ಸಲ್ಲಿಸಲಾಗಿದೆ. ಆದರೆ ಇಲ್ಲೊಂದು ಕಡೆ, ಅದರಲ್ಲೂ ತಹಶೀಲ್ದಾರ್ ಕಚೇರಿಯೊಂದರ ಆವರಣದಲ್ಲೇ ಗಾಂಧಿ-ಶಾಸ್ತ್ರಿ ಸೇರಿ ಹಲವು ಮಹನೀಯರಿಗೆ ಅಪಮಾನ ಅನಿಸುವಂತೆ ನಡೆದುಕೊಳ್ಳಲಾಗಿದೆ.

ಬೀದರ್ ಬಸವಕಲ್ಯಾಣ ನಗರದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿ ಹಲವು ಮಹನೀಯರ ಫೋಟೋಗಳನ್ನು ಎಸೆಯುವ ಮೂಲಕ ಅವಹೇಳನಕಾರಿ ವರ್ತನೆ ತೋರಲಾಗಿದೆ.

ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಇಂಥ ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net