

ಶಿರ್ವ: ನಮ್ಮ ಮಕ್ಕಳಿಗೆ ಸಮುದಾಯದ ಪರಂಪರೆ ಜತೆಗೆ ಅಧ್ಯಾತ್ಮದ ಒಲವು ಮೂಡಿಸಬೇಕು. ಒಳ್ಳೆಯ ವಿಚಾರಗಳನ್ನು ಒಪ್ಪಿಕೊಳ್ಳಬೇಕು. ಪ್ರಬುದ್ಧ ಚಿಂತನೆಯ ಅನುಭವ ಪಡೆಯಬೇಕು. ರಾವಾಯಣ, ಮಹಾಭಾರತ ಅನೇಕ ಜನರಿಗೆ ಬದುಕು ಕೊಟ್ಟಿದೆ. ಶಿಕ್ಷಣವಂತರು ವಾನವೀಯತೆ ಕಳೆದುಕೊಂಡಾಗ ಸಂರ್ಷಕ್ಕೆ ಕಾರಣವಾಗುತ್ತದೆ. ಆದರ್ಶಗಳು ಮನೆ-ಮನೆಗಳಲ್ಲೂ ಹುಟ್ಟಬೇಕು ಎಂದು ಚಿಂತಕ ಬಾರ್ಕೂರು ದಾಮೋದರ ಶರ್ಮ ಹೇಳಿದರು.
ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 21ನೇ ಗಣೇಶೋತ್ಸವ ಸವಾರಂಭದಲ್ಲಿ ಹಿರಿಯ ಸಾಧಕರನ್ನು, ಪ್ರತಿಭಾವಂತರನ್ನು ಗೌರವಿಸಿ ದಿಕ್ಸೂಚಿ ಭಾಷಣ ಮಾಡಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಂಟಕಲ್ಲು ವಾಧವ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಟೋನಿ ಮೋನಿಸ್, ಅಶೋಕ್ ಅರಸೀಕಟ್ಟೆ, ಗಣಪತಿ ಆಚಾರ್ಯ ಹೇರೂರು ಉಪಸ್ಥಿತರಿದ್ದರು.
ಗೌರವ ಅಧ್ಯಕ್ಷ ಶಂಕರ ನಾಯಕ್ ಬಂಟಕಲ್ಲು ಸ್ವಾಗತಿಸಿದರು. ಆಲ್ವಿನ್ ಸಲ್ಡಾನ್ಹಾ ಪರಿಚಯಿಸಿದರು. ಹೇರೂರು ವಾಧವ ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ದಿನೇಶ್ ದೇವಾಡಿಗ ವಂದಿಸಿದರು.
ಬಂಟಕಲ್ಲು ಕೃಷ್ಣಛಾಯಾದ ಪ್ರಫುಲ್ಲಾ ಜಯಶೆಟ್ಟಿ, ಪ್ರಭಾವಳಿ ಶಿಲ್ಪಿ ಶ್ರೀಕಾಂತ್ ಆಚಾರ್ಯ ಬಾರ್ಕೂರು, ಹಿರಿಯ ಸಾಧಕ ಶನಿಕಥಾ ಭಾಗವತ ಶ್ಯಾಮರಾಯ ರಾವ್, ಪ್ರಗತಿಪರ ಕೃಷಿಕ ಸುಂದರ ಪೂಜಾರಿ, ವಿಠಲ ಶೆಟ್ಟಿ ಹೇರೂರು, ಹಿರಿಯ ವ್ಯಾಪಾರಿ ವಿಶ್ವನಾಥ ಪಾಟ್ಕರ್ ಬಂಟಕಲ್ಲು, ನಿವೃತ್ತ ಶಿಕ್ಷಕ ರಿಚರ್ಡ್ ಸಲ್ಡಾನ್ಹಾ ಮೊದಲಾದವರನ್ನು ಸನ್ಮಾನಿಸಲಾಯಿತು.