

ಹೆಬ್ರಿ: ಕೆನರಾ ಬ್ಯಾಂಕ್ನ ಹೆಬ್ರಿ ಶಾಖೆ ನೇತೃತ್ವದಲ್ಲಿ ಹೆಬ್ರಿಯ ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆಗಳು, ಹೆಬ್ರಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಜನ ಸುರಕ್ಷಾ ಆಧಾರೀಕರಣ ಅಭಿಯಾನವನ್ನು ಮಣಿಪಾಲದ ಕೆನರಾ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್ಮೆಂಟ್ನ ಮಹಾಪ್ರಬಂಧಕ ಶ್ರೀನಾಥ್ ಜೋಶಿ ಉದ್ಘಾಟಿಸಿದರು.
ಹೆಬ್ರಿ ಗ್ರಾ.ಪಂ. ಅಧ್ಯಕ್ಷ ತಾರನಾಥ್ ಎಸ್.ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ವೃತ್ತ ಮುಖ್ಯಸ್ಥ ಎಚ್.ಕೆ.ಗಂಗಾಧರ್, ವೃತ್ತ ಕಚೇರಿ ಡಿಜಿಎಂ ಪಬಿತ್ ಕುಮಾರ್, ಎಜಿಎಂ ಪೂರ್ಣಾನಂದ, ಪ್ರಮುಖರಾದ ವಿಜಯಕುಮಾರ್, ಸುಜಾತ ಎಸ್, ಶ್ರೀನಿವಾಸ್, ಸದಾಶಿವ ಸೇರ್ವೆಗಾರ್, ವಸಂತಿ, ನವ್ಯಾ ಇದ್ದರು. ಹರೀಶ್ ಜಿ. ಸ್ವಾಗತಿಸಿದರು. ಡಾ.ಬೊಮ್ಮಯ್ಯ ಎಂ. ವಂದಿಸಿದರು. ಪ್ರಸಾದ್ ಶೆಟ್ಟಿ ನಿರೂಪಿಸಿದರು.