

ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶದ ಸಂಸತಿಯಲ್ಲಿ ಶಿಕ್ಷಕರು ಅಥವಾ ಅಕ್ಷರ ಜ್ಞಾನ ನೀಡುವ ಗುರುಗಳಿಗೆ ಶ್ರೇಷ್ಠ ಸ್ಥಾನವಿದೆ. ಅವರಿಂದ ಮಾತ್ರ ಸುಸ್ಕೃಸತ ಸಮಾಜ ನಿಮಾರ್ಣ ಸಾಧ್ಯವಿದೆ. ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಿ ಸರ್ವಶ್ರೇಷ್ಠ ನಾಯಕರನ್ನಾಗಿಸುವ ಸಾಮರ್ಥ್ಯವೂ ಅವರಲ್ಲಿದೆ. ಹೀಗಾಗಿ ಅಕ್ಷರದಾತರಾದ ಶಿಕ್ಷಕರು ಸಮಾಜದ ಕಣ್ಮಣಿಗಳು ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಕುಂಜಿಬೆಟ್ಟು ಸಗ್ರಿ ವಾರ್ಡ್ನ ಅಂಗನವಾಡಿ ಕೇಂದ್ರದಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆ ವತಿಯಿಂದ ಸರ್ವೇಪಲ್ಲಿ ರಾಧಾಕೃಷ್ಣನ್ ಜಯಂತಿ ನಿಮಿತ್ತ ಸೆಪ್ಟೆಂಬರ್ 6ರಂದು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಗುರು ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರ ದಿನಾಚರಣೆ ನಿಮಿತ್ತ ಶಾಲೆಯ ಶಿಕ್ಷಕಿ ಸಹನಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಂತಾ, ಲಕ್ಷ್ಮೀ, ಶ್ವೇತಾ, ಉಮಾ, ಶ್ರೀನಿವಾಸ್ ಡಿ., ಅನುರಾಧಾ ಜಿ.ಎಸ್., ಸುರೇಶ, ಶೋಭಾ ಪಿ., ರಾಘವೇಂದ್ರ, ಹೇಮಲತಾ, ಶ್ರೀದೇವಿ, ಚಂದ್ರಶೇಖರ, ರಮೇಶ, ವೀಣಾ, ಮಹಮ್ಮದ್ ಹುಸೇನ್ ಇತರರು ಉಪಸ್ಥಿತರಿದ್ದರು.
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗುರು-ಶಿಷ್ಯರ ಸಂಬಂಧ ಉತ್ತಮವಾಗಿ ಇರುವುದನ್ನು ಕಾಣುತ್ತೇವೆ. ಆದರೆ, ಇತ್ತೀಚೆಗಿನ ದಶಕಗಳಲ್ಲಿ ಈ ಸಂಬಂಧ ಕಡಿಮೆ ಆಗುತ್ತಿರುವುದು ಕಳವಳದ ಸಂಗತಿ. ಇಂದಿನ ಮಕ್ಕಳಿಗೆ ಪಾಲಕರು, ಗುರು-ಹಿರಿಯರನ್ನು ಗೌರವಿಸಬೇಕು ಎಂಬ ನೈತಿಕ ಪ್ರಜ್ಞೆ ಮೂಡಿಸಬೇಕಾದ ಅನಿವಾರ್ಯತೆ ಇದೆ. | ಸಹನಾ. ಶಿಕ್ಷಕಿ