ಸದ್ಯದಲ್ಲೇ ಕಾವೇರಿ 5ನೇ ಹಂತದ ಕಾಮಗಾರಿ ಪರಿಶೀಲನೆ; ಜಲಮಂಡಳಿ ಅಧ್ಯಕ್ಷ ಮಾಹಿತಿ

BWSSB
Published on

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸದ್ಯದಲ್ಲೇ ಕಾವೇರಿ 5ನೇ ಹಂತದ ಅಂತಿಮ ಕಾಮಗಾರಿ ಪರಿಶೀಲಿಸಲಿದ್ದಾರೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾವೇರಿ 5ನೇ ಹಂತದ ಕಾಮಗಾರಿಯ ಅಂತಿಮ ಹಂತದ ಪರೀಕ್ಷೆಗಳನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ, ಸದ್ಯದಲ್ಲೆ ಡಿ.ಕೆ.ಶಿವಕುಮಾರ್​ ಪರಿಶೀಲನೆ ನಡೆಸಲಿದ್ದಾರೆ. ನಂತರ ಯೋಜನೆ ಲೋಕಾರ್ಪಣೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.

ಕಾವೇರಿ 5ನೇ ಹಂತದ ಕಾಮಗಾರಿಯ ನೀರಿನ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಜೂ.6,7ರಂದು ವಿವಿಧ ಹಂತಗಳಲ್ಲಿ ನೀರು ಸರಬರಾಜು ನಿಲ್ಲಿಸಲಾಗಿತ್ತು. ಇದರಿಂದ ಕೆಲವೆಡೆ ಏರ್​ಲಾಕ್​ ಆದ ಪರಿಣಾಮ, ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net