ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಾಣಕ್ಕೆ ಭೂಮಿಪೂಜೆ

bwssb
Published on

ಬೆಂಗಳೂರು: ಹೆಬ್ಬಾಳದ ಎಚ್​ಬಿಆರ್​ ಬಡಾವಣೆ ಆವರಣದಲ್ಲಿ 60 ಎಂಎಲ್​ಡಿ ತ್ಯಾಜ್ಯ ನೀರಿನ ಸಂಸ್ಕರಣ ಘಟಕ ನಿರ್ಮಾಣಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್​ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

ಎಚ್​ಬಿಆರ್​ ಬಡಾವಣೆ, ಲಿಂಗರಾಜಪುರ, ಕೆ.ಜಿ.ಹಳ್ಳಿ, ಕಲ್ಯಾಣ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತ್ಯಾಜ್ಯ ನೀರಿನ ಪ್ರಮಾಣ ಹೆಚ್ಚಾಗಿದೆ. ಪರಿಣಾಮ ಕೊಳವೆ ಮಾರ್ಗಗಳಿಂದ ಆಗಾಗ್ಗೆ ತ್ಯಾಜ್ಯ ನೀರು ಉಕ್ಕಿ ಹರಿಯುತ್ತಿದ್ದು, ಮಳೆಗಾಲದಲ್ಲಿ ತ್ಯಾಜ್ಯ ನೀರು ಇಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ಹರಿಯುತ್ತಿರುತ್ತದೆ. ಈ ಯೋಜನೆಯಿಂದ ಎಚ್​ಬಿಆರ್​ ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತ್ಯಾಜ್ಯ ನೀರು ಉಕ್ಕಿ ಹರಿಯುವುದನ್ನು ನಿಯಂತ್ರಿಸಬಹುದಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ಇಂಜಿನಿಯರ್​ಗಳಾದ ಎಂ.ದೇವರಾಜು, ಎಲ್​.ಕುಮಾರ ನಾಯಕ್​, ಅಪರ ಮುಖ್ಯ ಇಂಜಿನಿಯರ್​ ಬಿ.ಎಸ್​.ಜಯಲಕ್ಷ್ಮಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net