ಕೆ-ರೈಡ್​ನಿಂದ ಸಮಾಲೋಚನಾ ಸಭೆ; ಪರಿಸರ, ಸಾಮಾಜಿಕ ಪರಿಣಾಮದ ಕುರಿತ ಚರ್ಚೆ

Kride
Published on

ಬೆಂಗಳೂರು: ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ ಹಾಗೂ ಕೆ-ರೈಡ್​ ವತಿಯಿಂದ ಉಪನಗರ ರೈಲ್ವೆ ಯೋಜನೆಯ ಪರಿಸರ ಮತ್ತು ಸಾಮಾಜಿಕ ಪರಿಣಾಮ ಮೌಲ್ಯಮಾಪನದ ಕುರಿತು ಶುಕ್ರವಾರ ಸಾರ್ವಜನಿಕ ಸಮಾಲೋಚನಾ ಸಭೆ ನಡೆಯಿತು.

ಇಂಡಿಯನ್​ ಗ್ರೀನ್​ ಬಿಲ್ಡಿಂಗ್​ ಕೌನ್ಸಿಲ್​ನ ಮಾನದಂಡಗಳಂತೆ ಉಪನಗರ ರೈಲ್ವೆ ಯೋಜನೆಯ 57 ನಿಲ್ದಾಣಗಳಲ್ಲಿ ಪರಿಸರ ಸ್ನೇಹಿ ಕಟ್ಟಡ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಸೌರ ವಿದ್ಯುತ್​ ಲಕ ಅಳವಡಿಸುವಿಕೆ, ನಗರದ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ 23 ಲೆವೆಲ್​ ಕ್ರಾಸಿಂಗ್​ಗಳಲ್ಲಿ 10 ಲೆವೆಲ್​ ಕ್ರಾಸಿಂಗ್​ಗಳ ರಸ್ತೆ ಮಟ್ಟವನ್ನು ಬದಲಾಯಿಸದೆ, ರೈಲ್ವೆ ಹಳಿಗಳನ್ನು ಎತ್ತರಿಸಿ ಹೊಸ ವಿಧಾನವನ್ನು ಅಳವಡಿಸಲಾಗಿದೆ. ಡಬಲ್​ ಡೆಕ್ಕರ್​ ಜೋಡಣೆಗೆ ಹೊಸ ತಂತ್ರಜ್ಞಾನ ಅನುಸರಿಸಲಾಗುತ್ತದೆ. ಉಪನಗರ ರೈಲ್ವೆ ಯೋಜನೆಯಿಂದಾಗಿ ಮುಂದಿನ 5 ವರ್ಷಗಳಲ್ಲಿ ಕಾರ್ಬನ್​ ಡೈ ಆಕ್ಸೆ ೃಡ್​ ಹೊರಸೂಸುವಿಕೆಯ ಉಳಿತಾಯ ಸುಮಾರು 710.45 ಕೋಟಿ ಟನ್​ ಆಗಿದೆ ಎಂದು ಕೆ&ರೈಡ್​ ತಿಳಿಸಿದೆ.

ಸಮಾಲೋಚನ ಸಭೆಯಲ್ಲಿ ಕೆ&ರೈಡ್​ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್​.ಮಂಜುಳಾ, ಪ್ರಾಜೆಕ್ಟ್​ ಆ್ಯಂಡ್​ ಪ್ಲಾನಿಂಗ್​ನ ನಿರ್ದೇಶಕ ರಾಕೇಶ್​ ಕುಮಾರ್​ ಸಿಂಗ್​, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್​.ಪುನೀತಾ, ಬಿಬಿಎಂಪಿ ಇಂಜಿನಿಯರ್​ ಪ್ರಹ್ಲಾದ್​, ಪರಿಸರ ತಜ್ಞರು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net