

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಹಾಗೂ ಉದ್ಯಮ ಆಡಳಿತ ವಿಭಾಗ ಮತ್ತು ಐಕ್ಯುಎಸಿ ಆಶ್ರಯದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕೋರ್ಸ್‌ಗಳ ಮಾಹಿತಿ ಕಾರ್ಯಾಗಾರ ನಡೆಯಿತು.
ಮಂಗಳೂರಿನ ಕೆರಿಯರ್ ಗೈಡೆನ್ಸ್ ಹಾಗೂ ಮೋಟಿವೇಷನಲ್ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ವರ್ಷಿತಾ ಹಾಗೂ ಧೀರಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅಲ್ಲದೆ ವಿದ್ಯಾರ್ಥಿಗಳಿಗೆ ಪದವಿ ನಂತರ ಮುಂದೇನು, ಉದ್ಯೋಗಾವಕಾಶ ಹಾಗೂ ವೃತ್ತಿ ಮಾರ್ಗದರ್ಶನ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ ಪಿ.ಟಿ., ಐಕ್ಯುಎಸಿ ಕೋ-ಆರ್ಡಿನೇಟರ್ ಲತಾ ಬಿ.ಟಿ., ಉಪನ್ಯಾಸಕರಾದ ಮಧುರ ಕೆ., ಕೃತಿಕಾ ಪಿ.ಎಸ್. ಉಪಸ್ಥಿತರಿದ್ದರು.