ವೈಜ್ಞಾನಿಕ ಕೃಷಿಯಿಂದ ಹೆಚ್ಚು ಲಾಭ : ರಾಮಕೃಷ್ಣ ಶರ್ಮ ಅಭಿಮತ

krushi
ಮಲ್ಲಿಗೆ ಕೃಷಿ ವೈಜ್ಞಾನಿಕ ಪದ್ಧತಿಯಲ್ಲಿ ಲಾಭಾದಾಯಕ, ಮಲ್ಲಿಗೆ ಕೃಷಿ, ಭತ್ತ ಹಾಗೂ ತೋಟಗಾರಿಕಾ, ಹಣ್ಣಿನ ಬೆಳೆಯ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಮಾಹಿತಿ ನೀಡಿದರು. ಇಲಾಖೆಯ ಸಹಾಯಕ ನಿರ್ದೇಶಕ ಕೆ.ಪ್ರವೀಣ್, ಜಯರಾಮ ಶೆಟ್ಟಿ ಕಟೀಲು, ವೀಣಾ ಸಲ್ಡಾನ ಗುತ್ತಕಾಡು ಉಪಸ್ಥಿತರಿದ್ದರು.
Published on

ಕಿನ್ನಿಗೋಳಿ: ಕೃಷಿಯಲ್ಲಿನ ಮಾಹಿತಿ ಕೊರತೆಯಿಂದ ರೈತರು ನಷ್ಟ ಅನುಭವಿಸುತ್ತಿದ್ದೇವೆ. ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿದರೆ ಹೆಚ್ಚು ಲಾಭ ಪಡೆಯಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದರು.

ಕಿನ್ನಿಗೋಳಿ ಸಹಕಾರಿ ಸೌಧದ ಸಭಾಭವನದಲ್ಲಿ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘ, ಕಿನ್ನಿಗೋಳಿ ಲಯನ್ಸ್ ಕ್ಲಬ್, ಕೆಥೊಲಿಕ್ ಸಭಾ ಕಿನ್ನಿಗೋಳಿ ಘಟಕ, ಭಾರತೀಯ ಕಿಸಾನ್ ಸಂಘ ಮೂಲ್ಕಿ ತಾಲೂಕು ಘಟಕದ ಸಹಯೋಗದಲ್ಲಿ ಮಲ್ಲಿಗೆ ಕೃಷಿ ವೈಜ್ಞಾನಿಕ ಪದ್ಧತಿಯಲ್ಲಿ ಲಾಭಾದಾಯಕ, ಮಲ್ಲಿಗೆ ಕೃಷಿ, ಭತ್ತ ಹಾಗೂ ತೋಟಗಾರಿಕಾ, ಹಣ್ಣಿನ ಬೆಳೆಯ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಇಲಾಖೆಯ ಸಹಾಯಕ ನಿರ್ದೇಶಕ ಕೆ.ಪ್ರವೀಣ್, ಜಯರಾಮ ಶೆಟ್ಟಿ ಕಟೀಲು, ವೀಣಾ ಸಲ್ಡಾನ ಗುತ್ತಕಾಡು, ಗಿರೀಶ್ ಶೆಟ್ಟಿ ತಾಳಿಪಾಡಿ, ಸದಾಶಿವ ಶೆಟ್ಟಿ ಕೆಮ್ರಾಲ್, ಕಿನ್ನಿಗೋಳಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಲವ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತೆರಜಾ ಕ್ರಾಸ್ತ, ಕೆಥೊಲಿಕ್ ಸಂಸ್ಥೆಯ ಗ್ರೇಟ್ಟಾ ಫರ್ನಾಂಡಿಸ್, ಭಾರತೀಯ ಕಿಸಾನ್ ಸಂಘದ ಪುರುಷೋತ್ತಮ ಕೋಟ್ಯಾನ್ ಉಪಸ್ಥಿತರಿದ್ದರು. ರಾಜೇಂದ್ರ ಶೆಣೈ ಸ್ವಾಗತಿಸಿದರು. ಲಯನ್ಸ್ ಅಧ್ಯಕ್ಷೆ ಹಿಲ್ಡಾ ಡಿಸೋಜ ವಂದಿಸಿದರು. ದಿಲೀಪ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net