ಇಂದ್ರಜಿತ್​ ಲಂಕೇಶ್​ರಿಂದ ಗೃಹ ಸಚಿವರ ಭೇಟಿ: ಸ್ಯಾಂಡಲ್​ವುಡ್​ನಲ್ಲಿ ಶುರುವಾಗುತ್ತಾ ಮತ್ತೊಂದು ಸುತ್ತಿನ ಸಮರ?

Indrajith-Lankesh-Final
Published on

ಬೆಂಗಳೂರು: ಡ್ರಗ್ಸ್​ ದಂಧೆಯಲ್ಲಿ ಸ್ಯಾಂಡಲ್​ವುಡ್​ ನಂಟು ಪ್ರಕರಣದಲ್ಲಿ ಹಲವು ಪ್ರಮುಖ ವಿಚಾರಗಳನ್ನು ಎಳೆದುತಂದು ಭಾರೀ ಸುದ್ದಿಯಾಗಿದ್ದ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಇದೀಗ ಗೃಹ ಸಚಿವ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವುದು ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಸುತ್ತಿನ ಸಮರ ಆಗುವ ಲಕ್ಷಣಗಳು ಕಾಣಿಸುತ್ತಿವೆ.

ಇನ್ನು ಕೆಲವೇ ಕ್ಷಣಗಳಲ್ಲಿ ಇಂದ್ರಜಿತ್ ಮಾಧ್ಯಮಗಳ ಮುಂದೆ ಬರಲಿದ್ದು, ಮೈಸೂರಿನಲ್ಲಿ ನಡೆದಿರುವ ಹಲವು ಪ್ರಕರಣಗಳ ಕುರಿತು ಮಾತನಾಡಲಿದ್ದಾರೆ. ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣ ಕುರಿತು ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ. ಮೈಸೂರಿನಲ್ಲಿ ನಡೆದಿರೋ ಗಲಾಟೆ, ಲೋನ್ ಹಗರಣ, ಮೈಸೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದಿರುವ ದಲಿತನ ಮೇಲಿನ ಹಲ್ಲೆ ಬಗ್ಗೆ ಇಂದ್ರಜಿತ್​ ಲಂಕೇಶ್​ ಅವರು ಹೊಸ ಬಾಂಬ್ ಸಿಡಿಸಲಿದ್ದಾರೆ.

ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಮಾದಕ ವಸ್ತುಗಳ ಮಾರಾಟ ಜಾಲವು ಮಿತಿಮೀರಿದೆ. ಪ್ರಭಾವಿಗಳು, ಸೆಲೆಬ್ರೆಟಿಗಳು, ಉದ್ಯಮಿಗಳಿಂದ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಸಿಡಿ ಲೇಡಿ ಆಯ್ತು ಈಗ ಅರುಣಾ ಕುಮಾರಿ ವಿಚಾರದಲ್ಲಿ ದೌರ್ಜನ್ಯ ನಡೆದಿದೆ. ಈ ದೌರ್ಜನ್ಯ ಪ್ರಕರಣಗಳನ್ನ ಹತ್ತಿಕ್ಕುವಲ್ಲಿ ಮೈಸೂರು ಪೊಲೀಸ್ ವಿಫಲವಾಗಿದೆ. ಹೀಗಾಗಿ ಈ ಎಲ್ಲಾ ವಿಚಾರಗಳ ಬಗ್ಗೆ ಗಮನಹರಿಸಿ ಮೈಸೂರು ಜಿಲ್ಲಾ ಪೊಲೀಸ್ ವ್ಯವಸ್ಥೆಗೆ ಚುರುಕು ಮುಟ್ಟಿಸಬೇಕು ಎಂದು ಇಂದ್ರಜಿತ್​ ಲಂಕೇಶ್​ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಯಾರೇ ತಪ್ಪು ಮಾಡಿದ್ರು, ಅವರು ಎಷ್ಟೇ ಪ್ರಭಾವಶಾಲಿಗಳಾಗಿದ್ರು ಅವರ ವಿರುದ್ಧ ತುರ್ತು ಹಾಗು ಕಠಿಣ ಕ್ರಮ‌ ಕೈಗೊಳ್ಳುವಂತೆ ಬಸವರಾಜ್​ ಬೊಮ್ಮಾಯಿ ಅವರಿಗೆ ಲಂಕೇಶ್​ ಅವರು ಮನವಿ ಸಲ್ಲಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net