More

    ಪ್ರೀತಿಸಿ ಮದ್ವೆಯಾದ ಕೆಲವೇ ದಿನಗಳಲ್ಲಿ ಮಹಿಳೆ ಎಸ್ಕೇಪ್: ಆಕೆಯ ಆಧಾರ್​ ಕಾರ್ಡ್ ನೋಡಿ ಕುಸಿದುಬಿದ್ದ ಪತಿ!​

    ಚಿತ್ತೂರು: ಪ್ರೀತಿ ಹೆಸರಲ್ಲಿ ಮದುವೆ ಆಗುವುದಾಗಿ ನಂಬಿಸಿ ವಂಚನೆ ಮಾಡುವ ಅನೇಕ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಯಾರದ್ದೇ ಸ್ನೇಹ ಮಾಡುವ ಮುನ್ನ ಅವರ ಪೂರ್ವಾಪರ ತಿಳಿದುಕೊಳ್ಳಬೇಕೆಂಬ ಸಲಹೆಗಳ ಹೊರತಾಗಿಯೂ ವಂಚನೆ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ ಸಂಗತಿಯೇ. ಇದೀಗ ಮತ್ತೊಂದು ವಂಚನೆ ಪ್ರಕರಣ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ.

    ಅನಾಥ ಯುವಕರನ್ನು ಗುರಿಯಾಗಿರಿಸಿ ಅವರನ್ನು ಪ್ರೀತಿಯ ಬಲೆಯಲ್ಲಿ ಕೆಡವಿ ಮದುವೆ ಎಂಬ ಹೆಸರಿನಲ್ಲಿ ಹಣ ಪೀಕಿ ವಂಚಿಸುತ್ತಿದ್ದ ಖತರ್ನಾಕ್​ ಸುಂದರಿ ಇದೀಗ ಪೊಲೀಸ್​ ಬಲೆಗೆ ಬಿದ್ದಿದ್ದಾಳೆ. ಈ ಘಟನೆ ಚಿತ್ತೂರಿನ ಅಲಿಪಿರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಿಲಾಡಿ ಲೇಡಿಯನ್ನು ಬಂಧಿಸಿ, ದೋಚಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.

    ವಿವರಣೆಗೆ ಬರುವುದಾದರೆ, ಸುನೀಲ್​ ಕುಮಾರ್​ (29) ಎಂಬಾತ ಚಿತ್ತೂರು ಜಿಲ್ಲೆಯ ವಿಜಯಪುರಂ ವಲಯದ ನಾಗರಾಜ ಕಂದ್ರಿಗ ಗ್ರಾಮದ ನಿವಾಸಿ. ಈತ ಮಾರ್ಕೆಟಿಂಗ್​ ಎಕ್ಸಿಕ್ಯೂಟಿವ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ತಿರುಪತಿಯ ಸತ್ಯನಾರಾಯಣಪುರಂನಲ್ಲಿ ನೆಲೆಸಿದ್ದಾನೆ. ಒಮ್ಮೆ ಎಬಿಡಿ ಫೈನಾನ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಸುಹಾಸಿನಿ ಎಂಬಾಕೆಯ ಪರಿಚಯ ಆಗುತ್ತದೆ. ಇಬ್ಬರ ಪರಿಚಯ ಬಳಿಕ ಪ್ರೀತಿಗೆ ತಿರುಗುತ್ತದೆ. ಹಿರಿಯರ ಸಮ್ಮುಖದಲ್ಲಿ ಇಬ್ಬರು ಕಳೆದ ಡಿಸೆಂಬರ್​ನಲ್ಲಿ ಮದುವೆಯು ಆಗುತ್ತಾರೆ.

    ಮದುವೆ ವೇಳೆ ಸುಹಾಸಿನಿಗೆ ಸುನೀಲ್​ ಮನೆಯವರು 20 ಗ್ರಾಂ ಚಿನ್ನವನ್ನು ಉಡುಗೊರೆಯಾಗಿ ನೀಡುತ್ತಾರೆ. ಇದಾದ ಬಳಿಕ ಸುಳ್ಳೊಂದನ್ನು ಹೇಳಿ ಸುನೀಲ್​ನಿಂದ 2 ಲಕ್ಷ ರೂ. ಪಡೆದುಕೊಳ್ಳುತ್ತಾಳೆ. ಅಲ್ಲದೆ, ಸುನೀಲ್​ ಸಂಬಂಧಿಕರ ಬಳಿಯೂ ಸುಹಾಸಿನಿ ಹಣವನ್ನು ಪಡೆದುಕೊಂಡಿರುತ್ತಾಳೆ. ಇದು ಸುನೀಲ್​ಗೆ ಗೊತ್ತಾಗುತ್ತದೆ.

    ಸುನೀಲ್​ ಮತ್ತು ಸುಹಾಸಿನಿ ನಡುವೆ ಜಗಳ ನಡೆಯುತ್ತದೆ. ಕಳೆದ ತಿಂಗಳು 8ನೇ ತಾರೀಖಿನಂದು ಸುಹಾಸಿನಿ ಯಾರಿಗೂ ಹೇಳದೇ ಮನೆಯನ್ನು ಬಿಟ್ಟು ಹೋಗುತ್ತಾಳೆ. ಆತಂಕಕ್ಕೀಡಾಗುವ ಸುನೀಲ್​ ಎಲ್ಲಾ ಕಡೆ ಹುಡುಕುತ್ತಾನೆ. ಪರಿಚಿತರ ಬಳಿ ವಿಚಾರಿಸುತ್ತಾನೆ. ಆದರೆ, ಪ್ರಯೋಜನ ಆಗುವುದಿಲ್ಲ. ಬಳಿಕ ಪೊಲೀಸ್​ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸುತ್ತಾನೆ.

    ಹೀಗಿರುವಾಗ ಮನೆಯಲ್ಲಿ ಏನಾದರೂ ಸಿಗಬಹುದೇ ಎಂದು ಹುಡುಕಾಡುವಾಗ ಸುನೀಲ್​ಗೆ ಆಕೆಯ ಆಧಾರ್​ ಕಾರ್ಡ್ ಪತ್ತೆಯಾಗುತ್ತದೆ. ಈ ವೇಳೆ ಆಕೆ ಮೊದಲೇ ನೆಲ್ಲೂರ್​ ಜಿಲ್ಲೆಯ ವೆಂಕಟೇಶ್ವರಲು ಎಂಬಾತನ ಜತೆ ಮದುಗೆ ಆಗಿ ಎರಡು ಮಕ್ಕಳಿರುವುದು ತಿಳಿದುವ ಶಾಕ್​ ಆಗುತ್ತದೆ.

    ಇನ್ನೊಂದೆಡೆ ಎರಡು ವರ್ಷಗಳ ಹಿಂದೆ ಕೊಟ್ಟಗುಡೆಮ್​ ಮೂಲದ ವಿನಯ್​ ಎಂಬಾತನ ಜತೆಯಲ್ಲೂ ಸುಹಾಸಿನಿಗೆ ಮದುವೆ ಆಗಿದೆ ಎಂಬ ವಿಚಾರವು ಬಯಲಿಗೆ ಬರುತ್ತದೆ. ಈ ವಿಚಾರ ತಿಳಿದ ಬೆನ್ನಲ್ಲೇ ಸುನೀಲ್, ಅಲಿಪಿರಿ ಪೊಲೀಸ್​ ಠಾಣೆಯಲ್ಲಿ ದೂರು ನೀಡುತ್ತಾನೆ. ವಂಚನೆ ಪ್ರಕರಣವು ದಾಖಲಾಗುತ್ತದೆ. ತನಿಖೆ ಆರಂಭಿಸುವ ಪೊಲೀಸರಿಗೆ ಸುಹಾಸಿನಿ ತಿರುಪತಿಯ ವಿವೇಕಾನಂದ ವೃತ್ತದ ಬಳಿ ಸಿಕ್ಕಿ ಬೀಳುತ್ತಾಳೆ. ಆಕೆಯನ್ನು ಮಂಗಳವಾರ ಬಂಧಿಸಲಾಗಿದೆ.

    ಅಂದಹಾಗೆ ವಿನಯ್​, ಸುಹಾಸಿನಿಗೆ ಎರಡನೇ ಗಂಡ. ಎರಡು ವರ್ಷಗಳ ಹಿಂದೆ ಇದೇ ರೀತಿಯಾಗಿ ಸುಹಾಸಿನಿ ಇಂದ ನಾನು ಮೋಸ ಹೋದೆ ಎಂದು ವಿನಯ್​ ವಿಡಿಯೋ ಮೂಲಕ ಹೇಳಿಕೊಂಡಿದ್ದಾನೆ. ಪ್ರೀತಿಸಿದ ಬಳಿಕ ತಾನೊಬ್ಬಳು ಅನಾಥೆ ಎಂದು ನಂಬಿಸಿ, 2019 ಮೇ 22ರಲ್ಲಿ ವಿನಯ್​ ಜತೆ ಮದುವೆ ಆಗಿದ್ದಾಳೆ. ಆತನಿಗೆ ತಿಳಿಯದಂತೆ ಆತನ ಕುಟುಂಬದಿಂದ ಸುಹಾಸಿನಿ ಬರೋಬ್ಬರಿ 10 ಲಕ್ಷ ರೂ. ಹಣವನ್ನು ವಸೂಲಿ ಮಾಡಿದ್ದಾಳೆ. ಮದುವೆ ಆದ ಎರಡೇ ತಿಂಗಳಲ್ಲಿ ಆಕೆಯ ವರ್ತನೆಯಲ್ಲಿ ವಿನಯ್​ ಬದಲಾವಣೆಯನ್ನು ಗುರುತಿಸಿದ್ದಾನೆ. ತನ್ನ ಅಂಕಲ್​ ಎಂದು ನೆಲ್ಲೂರು ಜಿಲ್ಲೆ ಕೊನೆತೆರಿಜು ಮೂಲದ ವೆಂಕಟೇಶ್ವರಲು ಎಂಬುವರನ್ನು ಪರಿಚಯ ಮಾಡಿಕೊಟ್ಟಳು. ಆದರೆ, ವೆಂಕಟೇಶ್ವರಲು ಆಕೆಯ ಮೊದಲ ಗಂಡ ಆಕೆಗೆ ಈಗಾಗಲೇ ಮದುವೆ ಆಗಿ ಎರಡು ಮಕ್ಕಳಿವೆ ಎಂದು ವಿನಯ್​ ವಿಡಿಯೋ ರೆಕಾರ್ಡ್​ ತಿಳಿಸಿದ್ದಾರೆ.

    ವಂಚನೆ ಬಳಿಕ ವಿನಯ್​ ಪ್ರಕರಣವನ್ನು ದಾಖಲಿಸಲು ಹೋದಾಗ ದೂರು ತೆಗೆದುಕೊಳ್ಳಲಿಲ್ಲ ಎಂದು ಪೊಲೀಸರನ್ನು ದೂರಿದ್ದಾರೆ. ಇದರಿಂದ ವಿನಯ್​ ಸುಮ್ಮನಾಗಿದ್ದ ಇದೀಗ ಅಲಿಪಿರಿ ಪೊಲೀಸರು ಆಕೆಯನ್ನು ಬಂಧಿಸಿದ್ದು ಅದರ ಬೆನ್ನೆಲ್ಲೇ ವಿನಯ್​ ತನಾಗದ ಮೋಸವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಬಂಧಿತ ಸುಹಾಸಿನಿ ಅನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗಿದೆ. (ಏಜೆನ್ಸೀಸ್​)

    ಪಿಎಸ್​ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್​ಪಿಗೆ ದೂರು ಕೊಟ್ಟ ಯುವತಿ!

    ಎಷ್ಟು ಗೋಗರೆದ್ರೂ ಪ್ರೀತಿಸಲು ಒಪ್ಪದ ಯುವತಿ: ಯೂಟ್ಯೂಬ್​ ನೋಡಿ ಸಂಚು ರೂಪಿಸಿದ ಪ್ರಿಯಕರ!

    ಜೈಲಿನ ಸಿಬ್ಬಂದಿ ಮುಖಕ್ಕೆ ಕಾರದ ಪುಡಿ ಎರಚಿ ಏಳು ಮಂದಿ ಕೈದಿಗಳು ಎಸ್ಕೇಪ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts