ಬೆಂಗಳೂರಿನ ಐಐಎಂನಲ್ಲಿ ಪದವೀಧರರಿಗೆ ಬೇಡಿಕೆ

Job
Published on

ಬೆಂಗಳೂರಿನ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾನೇಜ್​ಮೆಂಟ್​ (ಐಐಎಂಬಿ)ನಲ್ಲಿ ಅಸಿಸ್ಟೆಂಟ್​ ಮ್ಯಾನೇಜರ್​ ಮತ್ತು ಪೆಡಗೋಜಿಕಲ್​ ರಿಸರ್ಚ್​ ಅಸೋಸಿಯೇಟ್​ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಐಐಎಂಬಿನ ಮ್ಯಾಸ್ಸೀವ್​ ಓಪನ್​ ಆನ್​ಲೈನ್​ ಕೋರ್ಸ್​ (ಎಂಒಒಎಸ್​) ವಿಭಾಗದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂಗ್ಲಿಷ್​ ಭಾಷೆ ಹಾಗೂ ಕಂಪ್ಯೂಟರ್​ ಜ್ಞಾನ ಕೇಳಲಾಗಿದೆ. ವೃತ್ತಿ ಅನುಭವ ಇರುವವರಿಗೆ ಆದ್ಯತೆ ಇರಲಿದೆ. 7ನೇ ವೇತನ ಆಯೋಗದ ಅನ್ವಯ 4ನೇ ಹಂತದ ವೇತನ ಇದೆ. ಅಸಿಸ್ಟೆಂಟ್​ ಮ್ಯಾನೇಜರ್​ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 6 ಕೊನೇ ದಿನ, ರಿಸರ್ಚ್​ ಅಸೋಸಿಯೇಟ್​ಗೆ ಮೇ 10 ಕೊನೇ ದಿನವಾಗಿದೆ. ಮಾಹಿಗೆ, ಅಧಿಸೂಚನೆಗೆ https://bit.ly/3rQNMO4 ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net