ಕೃಷಿ ಉತ್ತೇಜನಕ್ಕೆ ಸಹಕಾರಿ ಸಂಘದ ಮುತ್ತುವರ್ಜಿ -ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅನಿಸಿಕೆ ; ವಿವಿಧ ಕಟ್ಟಡಗಳ ಉದ್ಘಾಟನೆ

rajendra molahalli
ನೂತನ ಕಟ್ಟಡ ಸಹಕಾರ ಸಾನ್ನಿಧ್ಯವನ್ನು ಡಾ.ಎಂ.ಎನ್ ರಾಜೇಂದ್ರಕುಮಾರ್ ಉದ್ಘಾಟಿಸಿದರು
Published on

ವಿಜಯವಾಣಿ ಸುದ್ದಿಜಾಲ ಜನ್ನಾಡಿ

ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಹಾಗೂ ಕೃಷಿ ಕಾರ್ಯಗಳಿಗೆ ಆದ್ಯತೆ ನೀಡುವಲ್ಲಿ ಸಹಕಾರಿ ವ್ಯವಸಾಯ ಸೇವಾ ಸಹಕಾರಿ ಸಂಘಗಳು ಹೆಚ್ಚಿನ ಮುತ್ತುವರ್ಜಿ ವಹಿಸುತ್ತಿದ್ದು, ರೈತರಿಗೆ 5 ಲಕ್ಷ ರೂ. ತನಕ ಬಡ್ಡಿ ಸಾಲ ಹಾಗೂ ರೈತರ ಮಿತಿಗೆ ಅನುಸಾರವಾಗಿ ಶೇ.3ರಂತೆ 10 ಲಕ್ಷ ರೂ. ತನಕ ಸಾಲ ದೊರೆತಂತಾಗುವುದರಿಂದ ಕೃಷಿಗೆ ಉತ್ತೇಜನ ದೊರೆಯಲಿದೆ ಎಂದು ಶಾಸಕ ಕಿರಣ್‌ಕುಮಾರ್ ಕೊಡ್ಗಿ ತಿಳಿಸಿದರು.

ಬಿದ್ಕಲ್‌ಕಟ್ಟೆಯಲ್ಲಿ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಶಿವರಾವ್ ಸಭಾಭವನ ಉದ್ಘಾಟಿಸಿ ಮಾತನಾಡಿದರು. ನೂತನ ಕಟ್ಟಡ ಸಹಕಾರ ಸಾನ್ನಿಧ್ಯವನ್ನು ಉದ್ಘಾಟಿಸಿ ಮಾತನಾಡಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ರಹಿತವಾಗಿ ಸಾಲ ನೀಡಬೇಕಿದ್ದರೆ ಸರ್ಕಾರ ಹೆಚ್ಚು ಮೊತ್ತವನ್ನು ಠೇವಣಿ ನೀಡಬೇಕು ಎಂದರು.

ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಸಂಘದ ಭದ್ರತಾ ಕೊಠಡಿ, ಕೆ.ಆರ್ ಸಹಕಾರಿ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್ ಗೋದಾಮು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ನವೀಕೃತ ಶಿವರಾವ್ ಪ್ರತಿಮೆಯನ್ನು ಉದ್ಘಾಟಿಸಿದರು.

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಮಹೇಶ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ರಾಜು ಪೂಜಾರಿ, ಭಾಸ್ಕರ ಕೋಟ್ಯಾನ್, ಅಶೋಕ್‌ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರ್, ಜಯರಾಜ್ ರೈ, ಅರುಣ್‌ಕುಮಾರ್ ಎಸ್.ವಿ, ಕುಂದಾಪುರ ಪ್ರಾಥಮಿಕ ಕೃಷಿ ಹಾಗೂ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ, ಮೊಳಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಎಂ.ದಿನೇಶ್ ಹೆಗ್ಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಚಂದ್ರಶೇಖರ ಶೆಟ್ಟಿ, ಹೊಂಬಾಡಿ -ಮಂಡಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶೆಟ್ಟಿ, ಹಾರ್ದಳ್ಳಿ- ಮಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾ ಆರ್.ಶೆಟ್ಟಿ, ಸ್ಕಾೃಡ್ಸ್ ಅಧ್ಯಕ್ಷ ರವೀಂದ್ರ, ಸಂಘದ ಉಪಾಧ್ಯಕ್ಷ ಸಿ.ಜಗನ್ನಾಥ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ವತಿ ಎಂ, ಹರಿಪ್ರಸಾದ್ ಶೆಟ್ಟಿ, ದಿನೇಶ್ ಹೆಗ್ಡೆ, ಲವಕರ ಹೆಗ್ಡೆ, ಎಚ್.ಬಾಲಕೃಷ್ಣ, ಪ್ರಶಾಂತ್, ಅನಿಲ್‌ಕುಮಾರ್ ಶೆಟ್ಟಿ, ಉಷಾ ಶೆಟ್ಟಿ, ಚೈತ್ರಾ ಅಡಪ, ಗಣೇಶ, ರಾಜು, ಉದಯ್ ಕುಲಾಲ್, ವಲಯ ಮೇಲ್ವಿಚಾರಕ ಸಂದೀಪ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಎಂ.ಮಹೇಶ್ ಹೆಗ್ಡೆ ಸ್ವಾಗತಿಸಿದರು. ನಿರ್ದೇಶಕ ದೀನಪಾಲ ಶೆಟ್ಟಿ ಮೊಳಹಳ್ಳಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.

ಹಲವರಿಗೆ ಸನ್ಮಾನ

ಡಾ.ಎಂಎನ್ ರಾಜೇಂದ್ರಕುಮಾರ್, ಸಂಘದ ಮಾಜಿ ಅಧ್ಯಕ್ಷ ಕವಲ್‌ಕೊಡ್ಲು ಶಿವರಾಮ ಶೆಟ್ಟಿ, ದೀನಪಾಲ ಶೆಟ್ಟಿ, ಹೊನ್ನಾಡ್‌ಬೈಲ್ ಚಂದ್ರಶೇಖರ್ ಹೆಗ್ಡೆ, ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಂಕರನಾರಾಯಣ ಉಳ್ಳೂರ್, ವಾಸುದೇವ ಭಟ್ ಜನ್ನಾಡಿ, ರತ್ನಾಕರ ಶೆಟ್ಟಿ, ಮಾಜಿ ಸಿಬ್ಬಂದಿ ಬಿ.ಸುಬ್ರಾಯ ಅಡಿಗ, ಗೋವಿಂದ ತಿಂಗಳಾಯ, ಜಯಂತಿ ಶೆಟ್ಟಿ, ಕಲ್ಪನಾ ಭಂಡಾರಿ, ಸ್ಥಳದಾನಿ ಸಂತೋಷ್‌ಕುಮಾರ್ ಶೆಟ್ಟಿ, ಇಂಜಿನಿಯರ್ ಪ್ರಶಾಂತ್ ಬಾಸಬೈಲು, ತಾರಾನಾಥ ಅವರನ್ನು ಸನ್ಮಾನಿಸಲಾಯಿತು.

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಶಿವರಾವ್ ಸಭಾಭವನವನ್ನು ಶಾಸಕ ಕಿರಣ್‌ಕುಮಾರ್ ಕೊಡ್ಗಿ ಉದ್ಘಾಟಿಸಿದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಸಂಘದ ಅಧ್ಯಕ್ಷ ಎಂ.ಮಹೇಶ ಹೆಗ್ಡೆ, ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಮೊದಲಾದವರಿದ್ದರು.

ಪ್ರತಿ ಗ್ರಾಮದ ಸಹಕಾರಿ ಸಂಸ್ಥೆಗಳು ರೈತರ ಜತೆಗೆ ಇತರ ವ್ಯವಾಹಾರ ಹಾಗೂ ಕ್ಷೇತ್ರಗಳಿಗೂ ಸ್ಪಂದಿಸುತ್ತಿದ್ದು, ಮಹಿಳೆಯರ ಸಬಲೀಕರಣದಲ್ಲಿ ನವೋದಯ ಸ್ವ ಸಹಾಯ ಸಂಘದ ಮೂಲಕ ನೆರವಾಗುವುದರ ಜತೆಗೆ ಸಹಕಾರಿ ಸಂಘ ಅಗತ್ಯವುಳ್ಳವರಿಗೆ ಕಲ್ಪವೃಕ್ಷವಿದ್ದಂತೆ.-ಡಾ.ಎಂ.ಎನ್.ರಾಜೇಂದ್ರ ಕುಮಾರ್, ಅಧ್ಯಕ್ಷ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net