

ಬೆಳ್ತಂಗಡಿ: ಜನಸಾಮಾನ್ಯರ ಪರವಾಗಿ ಸರ್ಕಾರದ ಕಾರ್ಯಕ್ರಮ ನಿರ್ವಹಿಸಲು ಅಪರ ಸರ್ಕಾರಿ ವಕೀಲರಿಗೆ ಉತ್ತಮ ಕಚೇರಿ ಬೇಕು, ಕಚೇರಿಯಲ್ಲಿ ಸುಸಜ್ಜಿತ ವ್ಯವಸ್ಥೆ ಇರಬೇಕು, ಆದರೆ ಇಲ್ಲಿ ವ್ಯವಸ್ಥೆ ಅಷ್ಟು ಉತ್ತಮವಾಗಿಲ್ಲ, ಇದಕ್ಕೆ ಸರ್ಕಾರದ ವತಿಯಿಂದ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ವಿಧಾನಪರಿಷತ್ ಶಾಸಕ ಐವನ್ ಡಿಸೋಜ ಹೇಳಿದರು.
ಬೆಳ್ತಂಗಡಿ ಸಿವಿಲ್ ನ್ಯಾಯಾಲಯದಲ್ಲಿ ಅಪರ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಮನೋಹರ್ ಕುಮಾರ್ ಅವರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ವಿಧಾನ ಪರಿಷತ್ ಮಾಜಿ ಶಾಸಕ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿದರು. ತಹಸೀಲ್ದಾರ್ ಪೃಥ್ವಿ ಸಾನಿಕಸಮ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಗುರುದೇವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಕೃಷ್ಣಪ್ಪ ಪೂಜಾರಿ, ಧರ್ಮದರ್ಶಿ ಯೋಗೀಶ್ ಪೂಜಾರಿ, ವಕೀಲರ ಸಂಘ ಅಧ್ಯಕ್ಷ ವಸಂತ ಮರಕಡ, ಕಾರ್ಯದರ್ಶಿ ನವೀನ್, ಹಿರಿಯ ಸಂಘ ಅಧ್ಯಕ್ಷ ಎಲೋಸಿಯಸ್ ಡಿಸೋಜ, ಜಿ.ಪಂ ಮಾಜಿ ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಶಾಹುಲ್ ಹಮೀದ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಹಿರಿಯ ವಕೀಲರಾದ ಬಿ.ಕೆ ಧನಂಜಯ್ ರಾವ್, ಶಶಿಕಿರಣ್ ಜೈನ್, ಪ್ರಮುಖರಾದ ಜಯವಿಕ್ರಮ್ ಕಲ್ಲಾಪು, ಚಿದಾನಂದ ಪೂಜಾರಿ, ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್ ಗೌಡ, ಜಗದೀಶ್ ಡಿ, ಈಶ್ವರ ಭಟ್ ಮಾಯ್ತೋಡಿ, ರಾಜ್ ಶೇಖರ್ ಶೆಟ್ಟಿ, ವಂದನಾ ಭಂಡಾರಿ, ಲೋಕೇಶ್ವರಿ ವಿನಯಚಂದ್ರ, ಪ್ರವೀಣ್ ಫನಾರ್ಂಡಿಸ್, ಕೇಶವ ಗೌಡ ಬೆಳಾಲು, ನಿತೇಶ್ ಕುಕ್ಕೇಡಿ, ಸುನೀಲ್ ಶಿರ್ಲಾಲು, ಎಪಿಪಿ ದಿವ್ಯರಾಜ್, ಇಸ್ಮಾಯಿಲ್ ಪೆರಿಂಜೆ, ಇಸುಬು ಇಳಂತಿಲ, ಶಿವಕುಮಾರ್, ನಾರಾಯಣ ಪೂಜಾರಿ ಮಚ್ಚಿನ, ಉಪಸ್ಥಿತರಿದ್ದರು. ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್.ಎ ಸ್ವಾಗತಿಸಿ, ವಂದಿಸಿದರು.