ಜನಾರ್ದನ ದೇವಳ ಪ್ರತಿಷ್ಠಾಪನಾ ಮಹೋತ್ಸವ

Bel_Janardhana Temple
Published on

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಶ್ರೀ ಸ್ವಾಮಿ, ಪರಿವಾರ ದೇವರ ಪುನಃಪ್ರತಿಷ್ಠಾಪನಾ ಮಹೋತ್ಸವ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯ ತಾಂತ್ರಿಕ ವಿಧಿ, ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಬೆಳಗ್ಗೆ ಅಷ್ಟೋತ್ತರ ಶತನಾಳಿಕೇರ ಗಣಪತಿ ಯಾಗ, ಬಿಂಬ ಶುದ್ಧಿ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ವೈದಿಕ ಸಮಾರಾಧನೆ, ಪ್ರಭಾತ್ ಭಟ್ ಮತ್ತು ಕುಟುಂಬಸ್ಥರ ಸೇವಾರ್ಥ ಅನ್ನಸಂತರ್ಪಣೆ, ರಾತ್ರಿ ಸಾರ್ವಜನಿಕ ರಂಗಪೂಜೆ, ಶ್ರೀ ಜನಾರ್ದನ ಸ್ವಾಮಿ, ಶ್ರೀ ಮಂಜುಳೇಶ ದೇವರ ಉತ್ಸವ ಅರ್ಚಕ ಶ್ರೀನಿವಾಸ ಹೊಳ್ಳರ ನೇತೃತ್ವದಲ್ಲಿ ಶ್ರೀ ಜನಾರ್ದನ ಸ್ವಾಮಿ ಪೂಜಾ ವಿಧಿ, ರಾಮಚಂದ್ರ ಹೊಳ್ಳರಿಂದ ಪಲ್ಲಪೂಜೆ ನಡೆಯಿತು.

ಅನ್ನಸಂತರ್ಪಣೆ ಸೇವಾಕರ್ತರಾದ ಪ್ರಭಾತ್ ಭಟ್ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಮೋಹನ್ ಕುಮಾರ್, ಭರತ್ ಕುಮಾರ್, ಪದ್ಮನಾಭ ಶೆಟ್ಟಿಗಾರ್, ರಾಮಚಂದ್ರ ಶೆಟ್ಟಿ, ಸಂಜೀವ ಶೆಟ್ಟಿ ಕುಂಟಿನಿ, ರವೀಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಾತ್ರಿ ಶ್ರೀ ಜನಾರ್ದನ ಸ್ವಾಮಿ, ಮಂಜುಳೇಶ ದೇವರ ಉತ್ಸವ ಮೂರ್ತಿಯನ್ನು ರಾಮಚಂದ್ರ ಹೊಳ್ಳ ಮತ್ತು ರಾಧಾಕೃಷ್ಣ ಹೊಳ್ಳರು ಉಡ್ಕಿ ಸುತ್ತು, ಚೆಂಡೆ ಸುತ್ತು, ಸೆಕ್ಸೋಪೋನ್ ಸುತ್ತು ಬಲಿ ಉತ್ಸವ, ಬೆಳ್ಳಿ ರಥೋತ್ಸವ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net