ಟೈಲರಿಂಗ್ ತರಬೇತಿ ಶಿಬಿರ ಉದ್ಘಾಟನೆ

New Project (42)
Published on

ಉಳ್ಳಾಲ: ಭಾರತ್ ಸೋಶಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಮತ್ತು ಬಾಳೆಪುಣಿ ಗ್ರಾಪಂ ಆಶ್ರಯದಲ್ಲಿ ಸ್ವಾತಂತ್ರೋತ್ಸವ ಮತ್ತು ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಶಿಬಿರ ಉದ್ಘಾಟನಾ ಕಾರ್ಯಕ್ರಮ ಗ್ರಾಪಂ ವಠಾರದಲ್ಲಿ ನಡೆಯಿತು.

ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಅಧೀಕ್ಷಕ ಹರೀಶ್ ಕುಮಾರ್ ಕುತ್ತಡ್ಕ ಸ್ವಾತಂತ್ರೋತ್ಸವ ಸಂದೇಶ ನೀಡಿದರು. ಬಾಳೆಪುಣಿ ಗ್ರಾಪಂ ಅಧ್ಯಕ್ಷೆ ಗೀತಾ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಹೊಲಿಗೆ ತರಬೇತಿ ಶಿಬಿರಕ್ಕೆ ಭಾರತ್ ಸೋಷಿಯಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎನ್.ಅಮೀನ್ ಚಾಲನೆ ನೀಡಿದರು.

ಬಾಳೆಪುಣಿ ಗ್ರಾಪಂ ಉಪಾಧ್ಯಕ್ಷ ಸಿ.ಎಂ.ಶರೀಫ್ ಪಟ್ಟೋರಿ, ಪಿಡಿಒ ವೆಂಕಟೇಶ್ ಪಿ., ಪಂಚಾಯಿತಿ ಕಾರ್ಯದರ್ಶಿ ಆಯಿಷ ಬಾನು ಬಿ.ಎ, ಅಬ್ದುಲ್ಲಾ ಬಜಾಲ್, ಸುಲೈಮಾನ್ ಪಕ್ಕಲಡ್ಕ, ತರಬೇತುದಾರೆ ಮಾಲಾಕ್ಷಿ, ರಿಯಾಝ್ ಕುತ್ತಾರ್, ಪಂಚಾಯಿತಿ ಸದಸ್ಯರು, ಸಂಸ್ಥೆಯ ಸದಸ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಅಶೀರುದ್ದೀನ್ ಸಾರ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net