ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆ ಲೋಕಾರ್ಪಣೆ

pdb
Published on

ಪಡುಬಿದ್ರಿ: ಅದಾನಿ ಸಿಎಸ್‌ಆರ್ ಯೋಜನೆಯಲ್ಲಿ ಬೆಳಪು ಗ್ರಾಪಂ ಇದುವರೆಗೆ 2 ಕೋಟಿ ರೂ. ಮೌಲ್ಯದ ಮೂಲ ಸೌಕರ್ಯ ಕಾಮಗಾರಿಗಳ ಲಾಭ ಪಡೆದಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲೂ ಸಹ ಹಲವಾರು ಸಾವಾಜಿಕ ಬೆಳವಣಿಗೆಯ ಯೋಜನೆಗಳ ಸವಲತ್ತನ್ನು ಗ್ರಾಮಗಳಿಗೆ ತಲುಪಿಸುತ್ತಿದೆ ಎಂದು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಹೇಳಿದರು.

ಅದಾನಿ ಸಿಎಸ್‌ಆರ್ 20 ಲಕ್ಷ ರೂ. ಯೋಜನಾ ವೆಚ್ಚದಲ್ಲಿ ನೂತನವಾಗಿ ಕಾಂಕ್ರೀಟ್ ಹಾಕಿದ ಪಣಿಯೂರು-ಪಡುಬಿದ್ರಿ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆ ಲೋಕಾರ್ಪಣೆ ಹಾಗೂ 20 ಲಕ್ಷ ರೂ. ವೆಚ್ಚದ ದ್ವಿತೀಯ ಹಂತದ ಯೋಜನೆಗೆ ಭೂಮಿಪೂಜೆ ಶನಿವಾರ ನೆರವೇರಿಸಿ ವಾತನಾಡಿದರು.

ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ವಾತನಾಡಿ, ಬೆಳಪು ಗ್ರಾಮದ ಪಡುಬಿದ್ರಿ ರೈಲ್ವೆ ನಿಲ್ದಾಣದಲ್ಲಿ ಮುಂಬೈ ಮತ್ತು ಬೆಂಗಳೂರು ರೈಲುಗಳ ನಿಲುಗಡೆಯನ್ನು ಒದಗಿಸುವಂತೆ ಅಧಿಕೃತವಾಗಿ ವಿನಂತಿಸಲಾಗಿದೆ. ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆಯಲ್ಲಿ ಜನ ಅನಧಿಕೃತವಾಗಿ ತ್ಯಾಜ್ಯ ಸುರಿಯುತ್ತಿದ್ದು, ಇದನ್ನು ತಡೆಯಲು ಗ್ರಾಪಂನಿಂದ ಸೋಲಾರ್ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದರು.

ಉಪಾಧ್ಯಕ್ಷೆ ಶೋಭಾ ಭಟ್, ಸದಸ್ಯರಾದ ಶರತ್ ಕುವಾರ್, ಸುಲೈವಾನ್, ನಫೀಸಾ, ಪಿಡಿಒ ಪ್ರವೀಣ್ ಡಿಸೋಜ, ವಾಜಿ ಸದಸ್ಯ ಕರುಣಾಕರ ಶೆಟ್ಟಿ, ತಾಪಂ ವಾಜಿ ಉಪಾಧ್ಯಕ್ಷ ಯು.ಸಿ. ಶೇಖಬ್ಬ, ಅದಾನಿ ಪವರ್ ಲಿಮಿಟೆಡ್‌ನ ಎಜಿಎಂ ರವಿ ಆರ್.ಜೇರೆ, ಅದಾನಿ ಫೌಂಡೇಶನ್‌ನ ಅನುದೀಪ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net