

ವಿಜಯವಾಣಿ ಸುದ್ದಿಜಾಲ ಉಡುಪಿ
ಕೃತಕ ಬುದ್ಧಿಮತ್ತೆ (ಎಐ)ಯು ಭವಿಷ್ಯದ ತಂತ್ರಜ್ಞಾನ ಹಾಗೂ ನೂತನ ಕೌಶಲವಾಗಿದೆ. ಮುಂದಿನ ದಿನಗಳಲ್ಲಿ ವಿಶ್ವದಲ್ಲಿಯೇ ಎಐಗೆ ಅಪಾರ ಮನ್ನಣೆ ಲಭಿಸಲಿದೆ. ಹೀಗಾಗಿ ಅದಕ್ಕೆ ಪೂರಕವಾದ ವಿವಿಧ ಕೋರ್ಸ್ಗಳನ್ನು ಮಣಿಪಾಲ ಸ್ಕಿಲ್ ಡೆವೆಲಪ್ಮೆಂಟ್ ಸೆಂಟರ್ನ ಆರಂಭಿಸಲಾಗಿದೆ. ಆ.26ರಂದು ಬೆಳಗ್ಗೆ 10 ಗಂಟೆಗೆ ಟಿಎಂಎ ಪೈ ಪಾಲಿಟೆಕ್ನಿಕ್ ಆಡಿಟೋರಿಯಂನಲ್ಲಿ ಎಐಸಿಟಿಇ ಅಧ್ಯಕ್ಷ ಪ್ರೊ (ಡಾ.) ಟಿ.ಜಿ. ಸೀತಾರಾಂ ಅವರು ಕೃತಕ ಬುದ್ಧಿಮತ್ತೆ (ಎಐ) ಶ್ರೇಷ್ಠತಾ ಘಟಕವನ್ನು ಉದ್ಘಾಟಿಸಲಿದ್ದಾರೆ ಎಂದು ಎಂಎಸ್ಡಿಸಿ ಅಧ್ಯಕ್ಷ ಬ್ರಿಗೇಡಿಯರ್ (ಡಾ.) ಸುರ್ಜಿತ್ ಪಾಬ್ಲಾ ಮಾಹಿತಿ ನೀಡಿದರು.
ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಆಗಸ್ಟ್ 23ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಸನ್ ಡಿಜಿಟಲ್ ಇಂಡಿಯಾ, ಇನ್ಟೆಕ್ ಹಾಗೂ ಗ್ಲೋಬಲ್ ಎಐ ಸೊಸೈಟಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಇಂಟೆಲ್ ಏಷ್ಯಾ ಫೆಸಿಫಿಕ್ನ ಉಪಾಧ್ಯಕ್ಷ ಡಾ. ಸಿಯಾನ್ ಬೂನ್ ನ್ಗೂ, ಕ್ಯಾಲಿಫೋರ್ನಿಯದ ಯುನಿವರ್ಸಿಟಿ ಆಫ್ ಸೌಥರ್ನ್ನ ಪ್ರಮುಖ ಪ್ರೊ. (ಡಾ.)ಉಂಬೆರ್ಟೋ ಸುಲ್ಪಾಸ್ಸೋ, ಏಷ್ಯಾ ಎಐ ಅಸೋಸಿಯೇಷನ್ ಅಧ್ಯಕ್ಷ ಡಾ. ಎಲ್.ಕ್ವಾನ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಬಳಸಲಿರುವ ಎಐ ಟೆನರ್ ಯಂತ್ರವನ್ನು ಪ್ರದರ್ಶಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಐಟಿ ಸ್ಕಿಲ್ನ ಎಚ್ಒಡಿ ರಾಜಲಕ್ಷ್ಮೀ ಆನಂದ, ಎಂಎಸ್ಡಿಸಿ ರಿಜಿಸ್ಟ್ರಾರ್ ಡಾ. ಅಂಜಯ್ಯ ಉಪಸ್ಥಿತರಿದ್ದರು.