

ಕೋಟ: ಕಾಲೇಜಿನಲ್ಲಿ ಇರುವ ಸುವ್ಯವಸ್ಥಿತ ಮೂಲಸೌಕರ್ಯಗಳ ಲಭ್ಯತೆ ಹಾಗೂ ವಿದ್ಯಾರ್ಥಿಗಳ ಒಟ್ಟು ಸಂಖ್ಯಾಬಲ ಕಂಡು ಇಂದು ಮಾದರಿ ಸರ್ಕಾರಿ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತಿರುವುದಾಗಿ ತಿಳಿಸಿ ಅಭಿಮಾನ ವ್ಯಕ್ತಪಡಿಸಿ. ವಿದ್ಯಾರ್ಥಿಗಳು ಇದೆಲ್ಲದರ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಿ ಎಂದು ಕರ್ಣಾಟಕ ಬ್ಯಾಂಕ್ ಎ.ಜಿ.ಎಂ.ವಾದಿರಾಜ ಕೆ. ಹೇಳಿದರು.
ಕರ್ಣಾಟಕ ಬ್ಯಾಂಕ್ ಸಹಭಾಗಿತ್ವದಲ್ಲಿ ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೇ ಸಾಲಿನಿಂದ ಪ್ರಾರಂಭಿಸಲಾದ ಬಿ.ಸಿ.ಎ.ಪದವಿ ಕೋರ್ಸ್‌ಗೆ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಪೂರೈಸಲಾದ 10 ಗಣಕಯಂತ್ರ ಹೀಗೆ 50 ಉತ್ತಮ ಗುಣಮಟ್ಟದ ಗಣಕಯಂತ್ರಗಳನ್ನು ಹೊಂದಿರುವ ಸುಸಜ್ಜಿತ ಗಣಕಯಂತ್ರ ಪ್ರಯೋಗಾಲಯ ಉದ್ಘಾಟಿಸಿ ಇತ್ತೀಚೆಗೆ ಮಾತನಾಡಿದರು.
ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯ ಶುಭಹಾರೈಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಮರಾಯ ಆಚಾರ್ಯ, ಅಧ್ಯಾಪಕ ಕಾರ್ಯದರ್ಶಿ ಡಾ.ಶೇಖರ ಬಿ., ಐಕ್ಯೂಎಸಿ ಸಂಚಾಲಕ ನಾಗರಾಜ ಯು. ಉಪಸ್ಥಿತರಿದ್ದರು. ಸ್ವಾತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಇಂಗ್ಲಿಷ್ ಅಧ್ಯಾಪಕಿ ಜಯಂತಿ ಬಾ ನಿರೂಪಿಸಿದರು.
ಕಾಲೇಜಿನ ಮಹಾದಾನಿಗಳಾದ ಕಾಳಾವರ ವರದರಾಜ ಎಂ.ಶೆಟ್ಟಿ ತಮ್ಮ ರಾಮಿ ಫೌಂಡೇಶನ್ ವತಿಯಿಂದ 20 ಗಣಕಯಂತ್ರ, ಕರ್ಣಾಟಕ ಬ್ಯಾಂಕ್ ವತಿಯಿಂದ 20 ಗಣಕಯಂತ್ರ ದೇಣಿಗೆಯಾಗಿ ನೀಡಿದ್ದಾರೆ.