ಬ್ರಹ್ಮಾವರ: ವಿದ್ಯುತ್ ಒಳ್ಳೆಯ ಮಿತ್ರ ಅದೇ ರೀತಿ ಕೆಟ್ಟ ಶತ್ರು ಕೂಡ ಹೌದು. ಸಾರ್ವಜನಿಕರು ಮತ್ತು ಇಲಾಖಾ ಸಿಬ್ಬಂದಿ ಅತಿಯಾದ ಆತ್ಮವಿಸ್ವಾಸದಿಂದ ಜೀವಕ್ಕೆ ಅಪಾಯ ತಂದುಕೊಳ್ಳುವ ವಿದ್ಯಮಾನ ಗ್ರಾಮೀಣ ಮತ್ತು ನಗರಭಾಗದಲ್ಲಿ ನಡೆಯುತಿರುವುದು ಹೆಚ್ಚುತ್ತಿರುವುದಕ್ಕೆ ಬ್ರಹ್ಮಾವರದಲ್ಲಿ ಎಲ್ಲ ಶಾಲಾ ಕಾಲೇಜು ಕಚೇರಿಯಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಬ್ರಹ್ಮಾವರ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ಪೂಜಾರಿ ಹೇಳಿದರು.
ಇಂಧನ ಇಲಾಖೆ, ವಿದ್ಯುತ್ ಪರಿವೀಕ್ಷಣಾಲಯ ನಿರ್ದೇಶನದಂತೆ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹದ ಅಂಗವಾಗಿ ಬ್ರಹ್ಮಾವರ ಮೆಸ್ಕಾಂ ಶನಿವಾರ ವಿದ್ಯುತ್ ಬಳಕೆ ಮತ್ತು ಸರಬರಾಜು ಕುರಿತು ಜಾಗೃತಿ ಜಾಥಾದಲ್ಲಿ ಮಾತನಾಡಿದರು. ನಗರದ ಬೀದಿಯಲ್ಲಿನ ಅಂಗಡಿ, ಮನೆ ಮತ್ತು ಸಾರ್ವಜನಿಕರಿಗೆ ಜಾಗೃತಿ ಕರಪತ್ರ ಹಂಚಲಾಯಿತು. ಸಹಾಯಕ ಇಂಜಿನಿಯರ್ ಸುದರ್ಶನ್, ಸಹಾಯಕ ಲೆಕ್ಕಾಧಿಕಾರಿ ಹೇಮಲತಾ, ಮೆಸ್ಕಾಂನ ಕಚೇರಿ ಸಿಬ್ಬಂದಿ, ಅಧಿಕಾರಿಗಳು ಲೈನ್‌ಮೆನ್‌ಗಳು ಜಾಗೃತಿ ಜಾಥಾದಲ್ಲಿದ್ದರು.