ಕಾರ್ಕಳ: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕ್ರಿಯೇಟಿವ್ ಸಮಾಗಮ ಕಾರ್ಯಕ್ರಮ ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಇತ್ತಿಚೇಗೆ ನಡೆಯಿತು.
ಸಂಸ್ಥೆಯ ಸ್ಥಾಪಕ ಅಮೃತ್ ರೈ, ವಿದ್ವಾನ್ ಗಣಪತಿ ಭಟ್ ವಿವಿಧ ಸಂಘಗಳ ಪಠ್ಯೇತರ ಚಟುವಟಿಕೆಗಳನ್ನೊಳಗೊಂಡ ವಿವಿಧ ಸಂಘಗಳನ್ನು ಉದ್ಘಾಟಿಸಲಾಯಿತು. ಕಾಲೇಜಿನ ತ್ರೈಮಾಸಿಕ ನಿನಾದ ಪತ್ರಿಕೆ ಏಳನೇ ಸಂಚಿಕೆಯನ್ನು ಸಂಸ್ಥಾಪಕ ಆದರ್ಶ ಎಂ.ಕೆ. ಬಿಡುಗಡೆಗೊಳಿಸಿದರು.
ಸಂಸ್ಥಾಪಕ ಗಣಪತಿ ಭಟ್ ಕೆ.ಎಸ್., ಅಶ್ವತ್ ಎಸ್.ಎಲ್., ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿ, ವಸತಿ ನಿಲಯ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ವಿನಾಯಕ್ ಜೋಗ್ ಹಾಗೂ ಶ್ರೀನಿಧಿ ಎಸ್.ನಾಯಕ್ ಸ್ವಾಗತಿಸಿದರು. ಭಾಷಾ ಉಪನ್ಯಾಸಕಿ ವೃಂದಾ ದಾತೆ ಹಾಗೂ ಪ್ರಿಯಾಂಕ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿದರು.