ಗೋ ಅಕ್ರಮ ಸಾಗಾಟ ವಾಹನ ಜಪ್ತಿ

Published on

ಕಡಬ: ಗೋ ಅಕ್ರಮ ಸಾಗಾಟದ ವಾಹನವನ್ನು ಕೊಯಿಲ ಸಮೀಪದ ನೀರಾಜೆ ಎಂಬಲ್ಲಿ ಕಡಬ ಪೊಲೀಸರು ತಡೆದು ಎರಡು ಗೋವುಗಳು ಹಾಗೂ ಸಾಗಾಟಕ್ಕೆ ಬಳಸಲಾದ ಪಿಕಪ್ ವಾಹನವನ್ನು ವಶಕ್ಕೆ ಪಡೆದ ಘಟನೆ ಬುಧವಾರ ಸಾಯಂಕಾಲ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಡಬ ಠಾಣಾಧಿಕಾರಿ ಅಭಿನಂದನ್ ನೇತೃತ್ವದ ಪೊಲೀಸರು, ಹಿರೆಬಂಡಾಡಿ ಕಡೆಯಿಂದ ರಾಮಕುಂಜ ಗ್ರಾಮದ ನೀರಾಜೆ ಎಂಬಲ್ಲಿಗೆ ಎರಡು ಹೋರಿಗಳನ್ನು ವಧೆ ಮಾಡುವ ಉದ್ದೇಶದಿಂದ ಪಿಕಪ್‌ನಲ್ಲಿ ತರುತ್ತಿದ್ದಾಗ ದಾಳಿ ನಡೆಸಿದ್ದಾರೆ. ಪಿಕಪ್‌ನಲ್ಲಿದ್ದ ನೀರಾಜೆ ನಿವಾಸಿಗಳಾದ ಸಿರಾಜ್ ಮತ್ತು ಜಾಬೀರ್ ಪರಾರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net