ಐಜಿಪಿ ರೂಪಾಗೆ ಶಾಕ್​ ನೀಡಿದ ಅಸ್ಸಾಂ ಕರೆ: ಸೈಬರ್​ ಪೊಲೀಸ್​ ಮೊರೆಹೋದ ಮಹಿಳಾ ಐಪಿಎಸ್ ಅಧಿಕಾರಿ!​

Roopa
Published on

ಬೆಂಗಳೂರು: ನಕಲಿ ಫೇಸ್​ಬುಕ್​ ಖಾತೆ ತೆರೆದು ಐಜಿಪಿ ರೂಪಾ ಅವರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಕೆಲ ವಂಚಕರು ಹಣ ಕಸಿಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಸಕೋಲಿನ್ ಚೌದ್ರಿ ಶರ್ಮ್ ಎಂಬ ಫೇಸ್​ಬುಕ್ ಅಕೌಂಟ್​ಗೆ ರೂಪ ಅವರ ಪೋಟೋ ಬಳಕೆ ಮಾಡಲಾಗಿದೆ. ಹಲವು ಜನರಿಗೆ ಇದೇ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು, ಫ್ರೆಂಡ್ಸ್​ ಆದವರಿಗೆ ನಂತರ ಮೇಸೆಂಜರ್​ನಲ್ಲಿ ನಾನು ಅಸ್ಸಾಂ ಸಿವಿಲ್ ಸರ್ವೆಂಟ್ ಎಂದು ಮೇಸೆಜ್ ಮಾಡಿ ಫೋನ್​ ನಂಬರ್ ಸಂಗ್ರಹಿಸಲಾಗುತ್ತಿತ್ತು.

ನಾಲ್ಕು ಐದು ವಾಟ್ಸ್​ಆ್ಯಪ್​ ಗ್ರೂಪ್ ಮಾಡಿ ಚಾರಿಟಬಲ್ ಟ್ರಸ್ಟ್​ಗೆ ಹಣ ನೀಡುವಂತೆ ಗ್ರೂಪ್​ನಲ್ಲಿ ಮೆಸೇಜ್ ಹಾಗೂ ವಾಯ್ಸ್ ಮೇಸೆಜ್ ಮಾಡಲಾಗುತ್ತಿತ್ತು. ಹಲವಾರು ಜನ ಇದನ್ನು ನಂಬಿ ಹಣವನ್ನು ಕೂಡ ಕಳುಹಿಸಿದ್ದಾರೆ. ಇದೀಗ ಅಸ್ಸಾಂನ ಕೆಲವರು ಐಜಿಪಿ ರೂಪಾಗೆ ಫೋನ್​ ಮಾಡಿ, ನಿಮ್ಮ ಪೋಟೋವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡಿರುವ ರೂಪಾ ಅವರು ಬೆಂಗಳೂರು ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ, ದೂರು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net